ಬಾಗಲಕೋಟ:- ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಹಿನ್ನೆಲೆ, ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಅತಿ ಹೆಚ್ಚು ನೀರು ಹರಿದು ಬರುತ್ತಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಮಹಾ ಮಳೆಯಿಂದ ಕೃಷ್ಣಾ ನದಿಗೆ 83 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ಹಿಪ್ಪರಗಿ ಡ್ಯಾಂಗೆ ಮದ್ಯರಾತ್ರಿ ಹೊತ್ತಿಗೆ 83 ಸಾವಿರ ಕ್ಯೂಸೆಕ್ ನೀರು ತಲುಪಲಿದೆ.
ಸದ್ಯ ಹಿಪ್ಪರಗಿ ಜಲಾಶಯದಿಂದ 38,000 ಕ್ಯೂಸೆಕ್ ಹೊರಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರು ಜಾಗೃತ ರಾಗಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಲ್ಲಿ ಪ್ರವಾಹ ಆತಂಕ ಉಂಟಾಗಿದೆ. ತುಂಬಿ ಹರಿಯುತ್ತಿರುವ ನದಿಗೆ ಜನ-ಜಾನುವಾರು ಇಳಿಯದಂತೆ ಮನವಿ ಮಾಡಿದ್ದಾರೆ.
ಸಧ್ಯಕ್ಕೆ ಪ್ರವಾಹ ಆತಂಕ ಇಲ್ಲ,ಜಾಗೃತೆ ಇರಲಿ ಎಂಬ ಸಂದೇಶವನ್ನು ಜಮಖಂಡಿ ಎಸಿ ಸಂತೋಷ ಕಾಮಗೊಂಡ ನೀಡಿದ್ದಾರೆ.