ಮಂಗಳೂರು : ಕರಾವಳಿ ಪ್ರದೇಶಗಳಾದ ಮಂಗಳೂರಿನಲ್ಲಿ ಭಾರೀ ಮಳೆಯ ಕಾರಣದಿಂದಾಗಿ ದಿನದಿಂದ ದಿನಕ್ಕೆ ಅನಾಹುತಗಳು ಹೆಚ್ಚಾಗುತ್ತಿದ್ದು, ಮಳೆರಾಯನ ಆರ್ಭಟದಿಂದ ಮಂಗಳೂರು ಹೊರವಲಯದ ಹಳೆಯಂಗಡಿಯ ಕೆಲ ಮನೆಗೆ ನೀರು ನುಗ್ಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಭಾಗದ ಜನರಿಗೆ ಜಲದಿಗ್ಭಂದನವಾದಂತಾಗಿದೆ. ಅಲ್ಲದೇ ತೆಂಗು ತೋಟಕ್ಕೂ ಸಹ ಮಳೆ ನೀರು ನುಗ್ಗಿ ಬೆಳೆಯು ನಾಶವಾಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಶಾಲಾ – ಕಾಲೇಜುಗಳಿಗೂ ಸಹ ರಜೆಯನ್ನು ಘೋಷಣೆ ಮಾಡಲಾಗಿದೆ.