ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಗುಡುಗು ಸಹಿತ ಅಬ್ಬರದ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅಲ್ಲದೇ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬತ್ತಿ ಹೋಗಿದ್ದ ತುಪ್ಪರಿ ಹಳ್ಳ ಈಗ ತುಂಬಿ ಬಂದಿದ್ದು ಕೂಡ ರೈತರಲ್ಲಿ ಹರ್ಷವನ್ನುಂಟು ಮಾಡಿದೆ.
ಧಾರವಾಡ ತಾಲೂಕಿನ ಹಾರೋಬೆಳವಡಿ ಹಾಗೂ ಇನಾಂಹೊಂಗಲದ ಮಧ್ಯೆ ಇರುವ ತುಪ್ಪರಿ ಹಳ್ಳದ ಸೇತುವೆ ಸಮಕ್ಕೆ ಹಳ್ಳ ತುಂಬಿ ಬಂದಿದೆ. ಕೆಲ ವರ್ಷಗಳ ಹಿಂದೆ ಅತಿವೃಷ್ಟಿಯಿಂದಾಗಿ ಈ ಸೇತುವೆಯೇ ಕೊಚ್ಚಿಕೊಂಡು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಧಾರವಾಡ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ ಸಂಪೂರ್ಣ ಮಳೆಯಾಗಿದೆ. ಈಗ ಬಿತ್ತನೆಗೆ ಸಜ್ಜಾಗುತ್ತಿರುವ ರೈತರಲ್ಲಿ ಈ ಮಳೆ ಹೊಸ ಆಶಾ ಭಾವನೆ ಮೂಡಿಸಿದೆ. ಇದರ ಜೊತೆಗೆ ಇದೀಗ ಬತ್ತಿ ಹೋಗಿದ್ದ ಹಳ್ಳ, ಕೊಳ್ಳಗಳಲ್ಲೂ ನೀರು ಬರುತ್ತಿರುವುದು ನಿಜಕ್ಕೂ ರೈತ ಸಮುದಾಯದಲ್ಲಿ ಹರ್ಷವನ್ನುಂಟು ಮಾಡಿದೆ.