ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಈ ನಡುವೆ ಮತದಾನ ಮುಗಿಯುತ್ತಿ ದ್ದಂತೆಯೇ ಚಿಗಿತುಕೊಂಡಿರುವ ಬೆಟ್ಟಿಂಗ್ ದಂಧೆ ವೇಗವನ್ನು ಪಡೆದುಕೊಂಡಿದೆ. ಈ ಸಂಬಂಧ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ (Joint Commissioner Sharanappa)ಅವರು, ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿರುವ ಹಿನ್ನಲೆ ಸಿಸಿಬಿಯಿಂದ ಈಗಾಗಲೇ ಸಾಕಷ್ಟು ಮಾಹಿತಿ ಕೆಲೆ ಹಾಕಲಾಗಿದೆ.
ಆದ್ರೆ ಯಾರೂ ಕೂಡ ಬಂದು ದೂರು ನೀಡಿಲ್ಲ. ಫೇಕ್ ಆನ್ ಲೈನ್ ಆಪ್ ಗಳ ಮೂಲಕ ಬೆಟ್ಟಿಂಗ್ ಆಡ್ತಾ ಇದ್ದಾರೆ. ಬಗ್ಗೆ ಸಾಕಷ್ಟು ಮಾಹಿತಿ ಈಗಾಗಲೇ ಬಂದಿದೆ. ಆದ್ರೂ ಪೊಲೀಸರು ಮೋಸ ಹೋದವರನ್ನು ಸಂಪರ್ಕ ಮಾಡ್ತಾ ಇದ್ದಾರೆ. ಅವರಿಂದ ದೂರು ಪಡೆದು ತನಿಖೆ ಮಾಡಲು ಮುಂದಾಗ್ತಾ ಇದ್ದಾರೆ. ಆದ್ರೆ ಇದುವರೆಗೂ ಮೋಸ ಹೋದವರು ಯಾರೂ ದೂರು ನೀಡಿಲ್ಲ ಎಂದರು. ಇನ್ನೂ ಇದೇ ವೇಳೆ ನಾಳೆ ನಡೆಯುವ ಮತ ಎಣಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಅವರು,
ನಾಳೆ ಚುನಾವಣಾ ಮತಎಣಿಕೆ ಹಿನ್ನಲೆ, CRPF, BSF, KSRP ಹಾಗೂ ಸ್ಥಳೀಯ ಪೊಲೀಸರಿಂದಲೂ ಭದ್ರತೆ ಮಾಡಲಾಗಿದೆ. ಪ್ರತಿ ಮತ ಎಣಿಕೆ ಕೇಂದ್ರದ ಬಳಿ ಇಬ್ಬರು ಡಿಸಿಪಿಗಳು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹಾಗೂ ನಾಳೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ನಾಳೆ ಇಡೀ ದಿನ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಂತೆ ಭದ್ರತೆ ಮಾಡಲಾಗಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಹೇಳಿಕೆ ನೀಡಿದ್ದಾರೆ.