ಮಹಾರಾಸ್ಟ್ರದ ಉಜನಿ ಹಾಗೂ ವೀರ ಭಟ್ಕರ್ ಜಲಾಶಯದಿಂದ ಭೀಮಾ ನದಿಗೆ ನೀರು ಬಿಟ್ಟ ಪರಿಣಾಮ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮ ಗುಡಿ ಜಲಾವೃತವಾಗಿದೆ..ನದಿ ತೀರದಲ್ಲಿರುವ ಯಲ್ಲಮ್ಮ ಗುಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.
ಹೀಗಾಗಿ ದೇಗುಲ ದರ್ಶನ ಪಡೆಯಲು ಬಯಸಿದ್ದ ದೇವಿ ಭಕ್ತರಿಗೆ ನಿರಾಸೆ ಮೂಡಿದೆ. ನಿನ್ನೆಯಸ್ಟೆ 1.40 ಲಕ್ಷ ಕ್ಯೂಸೆಕ್ ನೀರು ಮಹಾರಾಷ್ಟ್ರ ಜಲಾಶಯದಿಂದ ಬಿಡಲಾಗಿತ್ತು..ಹೀಗಾಗಿ ನದಿಪಾತ್ರದ ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ..