ಹುಬ್ಬಳ್ಳಿ: ಹುಬ್ಬಳ್ಳಿಯ ಐತಿಹಾಸಿಕ ಹಾಗೂ ಹಠಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ರಥೋತ್ಸವಕ್ಕೆ, ಹೆಲಿಕ್ಯಾಪ್ಟರ್ ದಿಂದ ಪುಷ್ಪಾರ್ಚನೆ ಮಾಡುವ ಮೂಲಕ, ಅದ್ದೂರಿಯಾಗಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ನಡೆಯಿತು.
ಸುಮಾರು 5 ಸಾವಿರ ಅಡಿ ಎತ್ತರದಲ್ಲಿನ ಹೆಲಿಕ್ಯಾಪ್ಟರ್ ಮೂಲಕ, ಶ್ರೀ ಸಿದ್ಧೇಶ್ವರ ರಥೋತ್ಸವ ವೇಳೆ ಪುಷ್ಪಾರ್ಚಣೆ ಮಾಡಿದ್ದು ಜನಮನ ಸೆಳೆಯಿತು. ಮೊದಲು ಹೂಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮುಖಾಂತರ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ವೀರಗಾಸೆ ನೃತ್ಯ, ಕಹಳೆ, ಮಂಗಳವಾದ್ಯಗಳು ಮೊಳಗಿದವು.
ಇನ್ನು ರಥಕ್ಕೆ ಹಾಗೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಬಂದಿದ್ದ ಭಕ್ತರು ಬಾಳೆಹಣ್ಣು, ಉತ್ತತ್ತಿ ರಥಕ್ಕೆ ಎಸೆದು ಭಕ್ತಿ ಭಾವ ಮೆರೆದರು. ರಥ ಎಳೆಯುತ್ತಿದ್ದಂತೆ ಭಕ್ತರ ಭಾವಾವೇಷ ಮುಗಿಲು ಮುಟ್ಟಿತ್ತು.
ಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲಿಮಠ, ಸೌದತ್ತಿ ಹಾಗೂ ಶ್ರೀ ಸಿದ್ದಯ್ಯನವರು ಹಿರೇಮಠ, ಶ್ರೀ ಸಿದ್ದನಗೌಡರು ಕಾಮ್ ಜೇನು, ಶ್ರೀ ಸಿದ್ದೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ರಾಜಣ್ಣ ಕೊರವಿ, ಅಡಿವೆಪ್ಪ ಮೆಣಸಿನಕಾಯಿ, ಹಾಗೂ ಗ್ರಾಮದ ಗುರುಹಿರಿಯರ ಸಮಕ್ಷಮದಲ್ಲಿ ಜಂಗಮ ವಟುಗಳಿಗೆ ಐಯಾಚಾರ