ಬೆಂಗಳೂರು:- ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ADGP ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮೋಟಾರು ವಾಹನ ಕಾಯ್ದೆ ಕಲಂ 129(ಎ) ಮತ್ತು (ಬಿ) ಅಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದ್ವಿಚಕ್ರವಾಹನ ಸಂಚಾರದ ವೇಳೆ ಹೆಲ್ಮೆಟ್ ನಿರ್ದಿಷ್ಟತೆಯ ಪಾಲನೆ ಮಾಡುವಂತೆ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.
ರಾಜ್ಯದ ವಿವಿಧ ಘಟಕಗಳಲ್ಲಿ ಅಪಘಾತ ಘಟನೆಗಳು ವರದಿಯಾಗುತ್ತಿವೆ. ಅದರಲ್ಲಿಯೂ ಹೆಲ್ಮೆಟ್ ಇಲ್ಲದೇ ಅಧಿಕಾರಿ ಮತ್ತು ಸಿಬ್ಬಂದಿ ರಸ್ತೆ ಅಪಘಾತದಲ್ಲಿ ಕೆಲವರಿಗೆ ಗಾಯಗಳಾದರೆ ಇನ್ನೂ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಮತ್ತೆ ಈ ರೀತಿಯ ಅಪಘಾತಗಳು ಮರು ಕಳುಹಿಸದಂತೆ ಕ್ರಮಕೈಗೊಂಡಿದ್ದು, ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ಹೆಲ್ಮೆಟ್ ಆದೇಶ ಹೊರಡಿಸಲಾಗಿದೆ