ಇನ್ಮುಂದೆ ನಗರದಲ್ಲಿರುವ ಜಿಕೆವಿಕೆ ಆವರಣದಲ್ಲಿ ತಿಂಗಳಿಗೊಂದು ಕೃಷಿ ಉತ್ಪನ್ನಗಳ ಸಂತೆ ನಡೆಯಲಿದೆ. ಈ ಬಗ್ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಸಂಸ್ಕರಿಸಿದ ಪದಾರ್ಥಗಳು, ತಂತ್ರಜ್ಞಾನ, ಯಂತ್ರೋಪಕರಣಗಳೂ ಸೇರಿದಂತೆ ನಾನಾ ವಸ್ತುಗಳು ಸಂತೆಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಬಹಳ ಮುಖ್ಯವಾಗಿ ಕೃಷಿ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು ಹಾಗೆ ಕೃಷಿ ವಿವಿಯ ಕಾರ್ಯವೈಖರಿ ಏನು ಎಂಬುದನ್ನು ಜನರಿಗೆ ತಿಳಿಸುವುದೇ ಪ್ರಮುಖವಾಗಿದೆ. ಹಾಗೆ ಬೆಳೆಸಿರುವ ಹಣ್ಣು, ತರಕಾರಿ, ಹೊಸ ಹೊಸ ತಳಿಗಳು ಸಂತೆಯಲ್ಲಿರುತ್ತವೆ. ಕೃಷಿ ವಿವಿಯಲ್ಲಿತಯಾರಿಸಿದಂತಹ ಪದಾರ್ಥಗಳು, ಯಂತ್ರೋಪಕರಣಗಳು ಕೂಡ ಇರಲಿದ್ದು, ನಗರದ ಕೃಷಿಕರಿಗೆ ಇದು ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಬೆಂಗಳೂರು ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರತಿ ವಾರಕ್ಕೊಮ್ಮೆ ರೈತ ಉತ್ಪಾದಕ ಸಂಸ್ಥೆಗಳು, ಸ್ವ ಸಹಾಯ ಸಂಘಗಳು ಸೇರಿದಂತೆ ರೈತಪರ ಸಂಸ್ಥೆಗಳ ಉತ್ಪನ್ನಗಳ ಮಾರಾಟಕ್ಕೆಂದೇ ಪ್ರತ್ಯೇಕ ಮಾರಾಟ ಮೇಳ ನಡೆಸಲು ಜಿಕೆವಿಕೆ ಚಿಂತನೆ ನಡೆಸಿದೆ.
ಕಳೆದ ತಿಂಗಳು ಕೃಷಿ ಉತ್ಪನ್ನಗಳ ಸಂತೆ ಆಯೋಜಿಸಿದ್ದೆವು. ಸುಮಾರು 5 ಸಾವಿರ ಮಂದಿ ಆಗಮಿಸಬಹುದೆಂದು ನಿರೀಕ್ಷಿಸಿದ್ದೆವು. ಆದರೆ, ಬರೋಬ್ಬರಿ 15 ಸಾವಿರ ಮಂದಿ ಆಗಮಿಸಿದರು. ಸಂತೆಯಲ್ಲಿ ನಾನಾ ಉತ್ಪನ್ನಗಳ ಮಾರಾಟದಿಂದ ಬರೋಬ್ಬರಿ 10 ಲಕ್ಷ ರೂ. ಸಂಗ್ರಹವಾಯಿತು. ಸಂತೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು