ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲೂ ಮದುವೆ ಸಂಭ್ರಮ ಶುರುವಾಗಿದ್ದು ಅದ್ದೂರಿಯಾಗಿ ಶಾಸ್ತ್ರಗಳು ನಡೆಯುತ್ತಿದೆ. ಧನಂಜಯ್-ಧನ್ಯತಾ ಅರಿಶಿನ ಶಾಸ್ತ್ರ ಕೂಡ ಜೋರಾಗಿ ನಡೆದಿದ್ದು ಹಲವರು ಹಳದಿ ಶಾಸ್ತ್ರದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಮೈಸೂರಿನಲ್ಲಿ ಫೆ.೧೬ರಂದು ಡಾಕ್ಟರ್ ಧನ್ಯತಾ ಅವರ ಜೊತೆ ಡಾಲಿ ಧನಂಜಯ ಮದುವೆ ನಡೆಯುತ್ತಿದೆ. ಇಂದು (ಫೆಬ್ರವರಿ 14) ಹಳದಿ ಶಾಸ್ತ್ರ ಮಾಡಲಾಗಿದೆ. ಆಪ್ತರು ಮತ್ತು ಕುಟುಂಬದವರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.
ಸಂಭ್ರಮದಿಂದ ನಡೆದ ಹಳದಿ ಶಾಸ್ತ್ರದಲ್ಲಿ ಡಾಲಿ ಧನಂಜಯ ಮತ್ತು ಧನ್ಯತಾ ಅವರು ಖುಷಿಯಿಂದ ಭಾಗಿ ಆಗಿದ್ದಾರೆ. ಹೊಸ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಫೋಟೋಗಳು ವೈರಲ್ ಆಗುತ್ತಿವೆ.
ಚಿತ್ರರಂಗದ ಆಪ್ತರು ಧನಂಜಯ ಅವರ ಹಳದಿ ಶಾಸ್ತ್ರದಲ್ಲಿ ಭಾಗಿ ಆಗಿದ್ದಾರೆ. ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ. ಪಾಟೀಲ್ ಮುಂತಾದವರು ಬಂದು ಡಾಲಿ ಧನಂಜಯ ಹಾಗೂ ಧನ್ಯತಾಗೆ ಶುಭ ಹಾರೈಸಿದ್ದಾರೆ.
ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯಲ್ಲಿ ಕೂಡ ಡಾಲಿ ಧನಂಜಯ ಅವರು ಫೇಮಸ್ ಆಗಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಮದುವೆಗೆ ಅಪಾರ ಸಂಖ್ಯೆಯಲ್ಲಿ ಆಪ್ತರು ಆಗಮಿಸಲಿದ್ದಾರೆ.
ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಮದುವೆಗೆ ಸ್ಯಾಂಡಲ್ವುಡ್ ಗಣ್ಯರು ಹಾಗೂ ಅನೇಕ ರಾಜಕೀಯ ನಾಯಕರು ಬರುವ ನಿರೀಕ್ಷೆ ಇದೆ. ಜೊತೆಗೆ ಟಾಲಿವುಡ್ ಮಂದಿ ಕೂಡ ಮದುವೆ ಭಾಗಿಯಾಗಲಿದ್ದಾರೆ ಎನ್ನಲಾಗ್ತಿದೆ.
ಧನಂಜಯ್ – ಧನ್ಯತಾ ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿತ್ತು. ಇನ್ ಲ್ಯಾಂಡ್ ಲೆಟರ್ ಮಾದರಿಯಲ್ಲಿತ್ತು. ಸಿಂಪಲ್ ಮದುವೆ ಪತ್ರಿಕೆ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಧನಂಜಯ್ ಮದುವೆ ಆಮಂತ್ರಣಕ್ಕೆ ಭಾರತೀಯ ಅಂಚೆ ಇಲಾಖೆ ಕೂಡ ಫಿದಾ ಆಗಿ ವಿಶೇಷ ಉಡುಗೊರೆ ನೀಡಿದೆ.
