ಮನಸು ತುಂಬಾ ಚಂಚಲ. ಅದು ಯಾವಾಗ ಹೇಗಿರುತ್ತದೆ, ಯಾವಾಗ ಬದಲಾಗುತ್ತದೆ ಎಂದು ಹೇಳಲಾಗದು. ಎಷ್ಟೇ ದೃಢ ಮನಸಿದ್ದರೂ ಕೆಲವೊಮ್ಮೆ ಬಂದೊದಗುವ ಸಂಕಷ್ಟಗಳು, ಇನ್ನೊಬ್ಬರು ಆಡುವ ಮಾತುಗಳು, ಜೀವನದಲ್ಲಿ ಎದುರಾಗುವ ಪರೀಕ್ಷೆಗಳು, ಕೆಲವೊಂದು ಸನ್ನಿವೇಶಗಳಲ್ಲಿ ಮನದಲ್ಲಿ ಬೇಸರ ಮೂಡಿ ಖಿನ್ನತೆಗೆ ಒಳಗಾಗುವಂತೆ ಮಾಡುತ್ತವೆ.
ಈ ಮನಸೇಕೆ ಹೀಗೆ? ಖಿನ್ನತೆ ಕವಿದಾಗ ಎಲ್ಲವೂ ಗೋಜಲು ಗೋಜಲಾಗಿ ಬಿಡಿಸಲಾಗದ ಕಗ್ಗಂಟಿನಂತೆ ಭಾಸವಾಗುತ್ತದೆ. ಏನು ಮಾಡಬೇಕೆಂದೇ ತೋಚುವುದಿಲ್ಲ. ಅತಂತ್ರ ಪರಿಸ್ಥಿತಿ. ಆಗ ಒಂದೆಡೆ ದುಃಖ; ಮತ್ತೊಂದೆಡೆ ಚಿಂತೆ, ನೋವು, ಬೇಸರ, ಗೊಂದಲಗಳ ಮಧ್ಯೆ ಹೆಣಗಾಡಬೇಕಾಗುತ್ತದೆ. ಮನಸು ನಿಂತ ನೀರಾಗಿ ತಟಸ್ಥವಾಗಿ ಬಿಡುತ್ತದೆ. ಖಿನ್ನತೆ ಹೆಚ್ಚಿದಂತೆ ಅದೊಂದು ಚಿಂತೆಯಾಗಿ ಪರಿವರ್ತನೆಯಾಗುತ್ತದೆ. ಖಿನ್ನ ಮನಸ್ಥಿತಿಯನ್ನು ಎದುರಿಸಲು ದೃಢ ಸಂಕಲ್ಪಬೇಕು. ಇಲ್ಲದಿದ್ದರೆ ಅದರಿಂದ ಹೊರಬರಲಾಗದೆ ಜೀವನವೇ ಬೇಡ ಎಂಬಂತೆ ಭಾಸವಾಗುತ್ತದೆ.
ಆದ್ದರಿಂದ ಖಿನ್ನತೆಯನ್ನು ಬೆಳೆಯಲು ಬಿಡಬಾರದು. ಚಿಂತೆಗೂ ಚಿತೆಗೂ ಹತ್ತಿರದ ಸಂಬಂಧ. ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಸಕಾರಾತ್ಮಕ ಚಿಂತನೆಗಳತ್ತ ತೊಡಗಿಸಿಕೊಳ್ಳಬೇಕು. ಖಿನ್ನತೆಯು ರೋಗಿಗಳಲ್ಲಿ ಆತ್ಮಹತ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ.
ಖಿನ್ನತೆಯ ಲಕ್ಷಣಗಳು
ಖಿನ್ನತೆಯನ್ನು ತಪ್ಪಿಸಲು, ನೀವು ಸ್ಥಿತಿಯ ಲಕ್ಷಣಗಳನ್ನು ಹೊಂದಿದ್ದರೆ ನೀವು ತಿಳಿದುಕೊಳ್ಳಬೇಕು. ಗಮನಹರಿಸಬೇಕಾದ ಖಿನ್ನತೆಯ ಸಾಮಾನ್ಯ ಲಕ್ಷಣಗಳು ಇಲ್ಲಿವೆ:
ಕೇಂದ್ರೀಕರಿಸಲು ಅಸಮರ್ಥತೆ
ಅತಿಯಾದ ತಪ್ಪಿತಸ್ಥ ಭಾವನೆ
ಕಡಿಮೆ ಸ್ವ-ಮೌಲ್ಯ
ಆತ್ಮಹತ್ಯೆ ಆಲೋಚನೆಗಳು
ಹಸಿವು ಬದಲಾವಣೆಗಳು
ತೂಕದಲ್ಲಿ ಹಠಾತ್ ಬದಲಾವಣೆಗಳು
ಸುಸ್ತಾಗುತ್ತಿದೆ
ಕಡಿಮೆ ಶಕ್ತಿ
ಸಿಡುಕುತನ
ಆತಂಕ
ಹತಾಶತೆ
ಮೂಡ್ ಸ್ವಿಂಗ್ಸ್
ನೀವು ಅಥವಾ ನಿಮ್ಮ ಸುತ್ತಲಿರುವ ಯಾರಾದರೂ ಈ ರೋಗಲಕ್ಷಣಗಳನ್ನು ಅನುಭವಿಸಿದರೆ, ನಿಮಗಾಗಿ ಉತ್ತಮ ಚಿಕಿತ್ಸೆಯ ಕೋರ್ಸ್ ಅನ್ನು ತಿಳಿಯಲು ನಿಮ್ಮ ಆರೋಗ್ಯ ಪೂರೈಕೆದಾರರನ್ನು ಸಂಪರ್ಕಿಸಿ.
ಖಿನ್ನತೆಯನ್ನು ನಿವಾರಿಸುವುದು ಹೇಗೆ?
ಖಿನ್ನತೆಯನ್ನು ಹೇಗೆ ಹೋಗಲಾಡಿಸುವುದು ಎಂದು ತಿಳಿಯಲು ಮನೋವೈದ್ಯ ಡಾ ಸಂತೋಷ್ ಬಂಗಾರ್ ಅವರ ಸಲಹೆಗಳು ಹೀಗಿವೆ.
ಸಹಾಯ ಪಡೆಯಿರಿ
ಖಿನ್ನತೆ ಎಂಬುದು ಸಾಮಾನ್ಯವಾಗಿ ಭಾವನೆಗಳ ಹೆಚ್ಚುವರಿ ಹೊರೆಯನ್ನು ನಾವು ಹೊತ್ತಿರುವಂತೆ ಭಾಸವಾಗಿಸುತ್ತದೆ. ನಮ್ಮ ಜೀವನದ ಪ್ರತಿಯೊಂದು ಅಂಶದ ಮೇಲೆ ಇದು ಪರಿಣಾಮ ಬೀರಬಹುದು ಹಾಗೂ ಸರಳ ಕಾರ್ಯ ಕೂಡ ದೊಡ್ಡ ಪರ್ವತದಂತೆ ಕಾಣಬಹುದು.
ಖಿನ್ನತೆಯನ್ನು ಹೋಗಲಾಡಿಸಲು ಬೇರೆ ಬೇರೆ ಚಿಕಿತ್ಸೆಗಳಿದ್ದು ಒಂದೇ ರೀತಿಯ ಚಿಕಿತ್ಸೆಯನ್ನು ಅನುಸರಿಸಬೇಕು. ಖಿನ್ನತೆಯನ್ನು ನಿಭಾಯಿಸುವುದನ್ನು ತಪ್ಪಿಸಬಾರದು ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಆದರೆ ಅದನ್ನು ಧೈರ್ಯದಿಂದ ಎದುರಿಸಬೇಕು.
ವೇಳಾಪಟ್ಟಿಗೆ ಬದ್ಧರಾಗಿರಿ
ಖಿನ್ನತೆಯಂತಹ ಕಠಿಣ ಸಮಯಗಳನ್ನು ಅನುಭವಿಸುತ್ತಿರುವಾಗ, ಯಾರಿಗಾದರೂ ತಮ್ಮ ದೈನಂದಿನ ದಿನಚರಿಗೆ ಮರಳಲು ದಣಿದು ಹೋಗಬಹುದು.
ಇದು ವ್ಯಾಕುಲತೆಯಾಗಿಯೂ ಪರಿಣಾಮ ಬೀರಬಹುದು ಮತ್ತು ಅಡ್ಡಿಯನ್ನುಂಟು ಮಾಡಬಹುದು. ದೈನಂದಿನ ದಿನಚರಿಯನ್ನು ಅನುಸರಿಸುವುದು ಖಿನ್ನತೆ, ಬೇಸರದಿಂದ ಹೊರಬರಲು ಸಹಾಯ ಮಾಡುತ್ತದೆ.
ಜೀವನದಲ್ಲಿ ಉದ್ದೇಶ ಮತ್ತು ಸ್ಥಿರತೆಯ ಪ್ರಜ್ಞೆಯನ್ನು ಒದಗಿಸಲು ಸಹಾಯ ಮಾಡಲು ನಿಯಮಿತ ಚಟುವಟಿಕೆಗಳನ್ನು ಒಳಗೊಂಡಿರುವ ವೇಳಾಪಟ್ಟಿಯನ್ನು ರಚಿಸಬಹುದು.
ನಕಾರಾತ್ಮಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದಿರಿ
ಖಿನ್ನತೆಯು ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡುವ ಒಂದು ಸ್ಥಿತಿಯಾಗಿದೆ ಆದರೆ ಈ ಸಮಯದಲ್ಲಿ ಧನಾತ್ಮಕ ಆಲೋಚನೆಗಳನ್ನೇ ನಾವು ಮಾಡಬೇಕು.
ಖಿನ್ನತೆಯಿಂದ ನಮ್ಮನ್ನು ನಾವೇ ದೂಷಿಸಬಹುದು ಹಾಗೂ ನಿರಾಶೆ ನಮ್ಮನ್ನು ಬೆನ್ನಟ್ಟಬಹುದು ಈ ಸಮಯದಲ್ಲಿ ಆ ಅಂಶಗಳು ನಮ್ಮತ್ತ ಸುಳಿಯದಂತೆ ನಾವು ನಿಗ್ರಹಿಸಿಕೊಳ್ಳಬೇಕಾಗುತ್ತದೆ.
ನಿಮ್ಮನ್ನು ನೀವು ಪ್ರೋತ್ಸಾಹಿಸಿ
ಖಿನ್ನತೆಯಿಂದ ಹೊರಬರಲು ನೀವು ತೆಗೆದುಕೊಳ್ಳುವ ತಿಯೊಂದು ಸಣ್ಣ ಹೆಜ್ಜೆಯನ್ನು ಗುರುತಿಸಬೇಕು ಮತ್ತು ಪ್ರಶಂಸಿಸಬೇಕು ಇದನ್ನೊಂದು ವಿಜಯದಂತೆ ಆಚರಿಸಿ.
ವಾಸ್ತವಿಕ ಗುರಿಗಳನ್ನು ಹೊಂದಿಸಿ
ಜನರು ಸಾಮಾನ್ಯವಾಗಿ ಸಾಧಿಸಲು ಕಷ್ಟಕರವಾದ ಗುರಿಗಳನ್ನು ಹೊಂದಿಸುತ್ತಾರೆ ಖಿನ್ನತೆಯಿಂದ ಬಳಲುವವರಿಗೆ ಇದು ಕಷ್ಟಕರವಾಗಿರುತ್ತದೆ ಈ ಸಮಯದಲ್ಲಿ ಸರಳವಾದ ಗುರಿಗಳನ್ನು ಹೊಂದಿಸಿ.
ನಿಮಗೆ ಇಷ್ಟವಾದುದನ್ನು ಮಾಡಿ
ನಿಮಗೆ ಇಷ್ಟದ ಚಟುವಟಿಕೆಗಳನ್ನು ಖಿನ್ನತೆಯ ಸಮಯದಲ್ಲಿ ನಿರ್ವಹಿಸಿ. ಡೂಡಲಿಂಗ್, ಪುಸ್ತಕ ಓದುವುದು, ಬೇಕಿಂಗ್, ಪೇಸ್ಟ್ರಿ, ಪೇಪರ್ ಓದುವುದು ಮೊದಲಾದ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.
ಆರೋಗ್ಯಕರ ಜೀವನ ಶೈಲಿ ಅನುಸರಿಸಿ
ನಿಯಮಿತವಾಗಿ ವ್ಯಾಯಾಮ ಮಾಡಿ ಹಾಗೂ ಸಮತೋಲಿತ ಆರೋಗ್ಯಕರ ಆಹಾರ ಸೇವಿಸಿ. ಮದ್ಯಪಾನ, ಧೂಮಪಾನ ಕಡಿಮೆ ಮಾಡಿ. ದಿನಕ್ಕೆ 7-8 ಗಂಟೆಗಳ ಕಾಲ ನಿದ್ದೆ ಮಾಡಿ.
ಒಂಟಿಯಾಗಿರುವುದನ್ನು ತಪ್ಪಿಸಿ
ಖಿನ್ನತೆಗೆ ಒಳಗಾಗಿದ್ದಾಗ ನಾವು ಒಂಟಿಯಾಗಿರಬೇಕೆಂದು ಹಾಗೂ ಎಲ್ಲರೊಂದಿಗೆ ಬೆರೆಯಬಾರದೆಂದು ಮನಸ್ಸು ಬಯಸುತ್ತದೆ. ಆದರೆ ಹೀಗಾದಾಗ ನೀವು ಇದನ್ನು ತಪ್ಪಿಸಬೇಕು. ಎಲ್ಲರೊಂದಿಗೆ ಬೆರೆಯಲು ಮುಂದಾಗಬೇಕು ಆದಷ್ಟು ನಿಮ್ಮ ಪ್ರೀತಿಪಾತ್ರರ ಸಂಪರ್ಕದಲ್ಲಿರಬೇಕು.