ತಿಗಣೆಗಳು ಒಮ್ಮೆ ನಿಮ್ಮ ಮನೆಗೆ ಎಂಟ್ರಿ ಕೊಟ್ಟರೆ ಅದನ್ನು ಓಡಿಸುವುದು ಬಹು ಕಷ್ಟದ ಕೆಲಸ. ಇನ್ನು, ತಿಗಣೆಗಳು ಒಂದು ಕೋಣೆಯ ಮೂಲೆಯನ್ನು ಪ್ರವೇಶಿಸಿದರೂ ಸಾಕು ಅವುಗಳು ಕ್ರಮೇಣವಾಗಿ ಸಂಪೂರ್ಣ ಮನೆಯ ಎಲ್ಲ ಕೋಣೆಗಳಿಗೂ ಪ್ರವೇಶಿಸಿ, ಇದರಿಂದ ಅವುಗಳ ಕಾಟ ಹೆಚ್ಚಾಗುತ್ತದೆ. ಈ ಹಿನ್ನೆಲೆ, ತಿಗಣೆ ಕಾಟದಿಂದ ಮುಕ್ತಿ ಪಡೆಯಲು ಸೂಪರ್ ಟಿಪ್ಸ್ಗಳು ಇಲ್ಲಿದೆ ನೋಡಿ.
ತಿಗಣೆ ಅಥವಾ ಬೆಡ್ ಬಗ್ಗಳು ಲಗೇಜ್, ಬಟ್ಟೆ, ಹಾಸಿಗೆ ಹಾಗೂ ಪೀಠೋಪಕರಣಗಳಿಗೆ ಸುಲಭವಾಗಿ ಹತ್ತಬಹುದಾಗಿದ್ದು, ಅಲ್ಲದೆ, ಕೆಲವೇ ದಿನಗಳಲ್ಲಿ ಅವುಗಳ ಸಂಖ್ಯೆ ಹಲವು ಪಟ್ಟು ಏರಿಕೆಯಾಗುವ ಸಂಭವಗಳೇ ಹೆಚ್ಚು. ಆದರೆ, ತಿಗಣೆ ನಿಮಗೆ ಕಡಿದರೆ ಅದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಒಂದು ವೇಳೆ ತುರಿಕೆ ಹೆಚ್ಚಾದರೆ ಸ್ಟೆರಾಯ್ಡ್ ಕ್ರೀಮ್ಗಳನ್ನು ಬಳಸಿಕೊಂಡು ರಿಲೀಫ್ ಪಡೆದುಕೊಳ್ಳಬಹುದು.
ನಂತರ ಸಂಭವಿಸುವ ಬ್ಯಾಕ್ಟೀರಿಯಾದ ಸೋಂಕುಗಳು ಹೆಚ್ಚು ಪ್ರದೇಶದ ಮೇಲೆ ಹರಡಿದರೆ ಆ್ಯಂಟಿಬಯಾಟಿಕ್ಗಳನ್ನು ಬಳಸಬಹುದಾಗಿದೆ. ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳದಿದ್ದರೆ ತಿಗಣೆಗಳು ಇನ್ನೂ ಹೆಚ್ಚಾಗಿ ಹರಡಲಿದ್ದು, ಅದನ್ನು ತಡೆಯಲು ಸಾಮಾನ್ಯ ಕೀಟ ನಿಯಂತ್ರಣವನ್ನು ತಿಂಗಳಿಗೆ ಎರಡು ಬಾರಿ ಬಳಸಬಹುದಾಗಿದೆ.
ಇನ್ನು, ಹಾಸಿಗೆ ಹಾಗೂ ಬಟ್ಟೆಗಳಿಗೆ ತಿಗಣೆ ಹತ್ತಬಹುದಾಗಿದ್ದು, ಈ ಹಿನ್ನೆಲೆ ಅವುಗಳನ್ನು ಕನಿಷ್ಠ 120 ಫಾರೆನ್ಹೀಟ್ ಬಿಸಿ ನೀರಲ್ಲಿ ತೊಳೆಯಬೇಕಾಗುತ್ತದೆ. ಯಾಕೆಂದರೆ, ಬಟ್ಟೆ ಹಾಗೂ ಹಾಸಿಗೆಗಳಿಗೆ ಯಾವುದೇ ಕೀಟ ನಿಯಂತ್ರಕವನ್ನು ಬಳಸುವ ಹಾಗಿಲ್ಲ.
ಘನೀಕರಣ ಮಾಡಬಹುದಾಗಿದ್ದರೂ, ಅದು ಕೇವಲ ಚಳಿಗಾಲದಲ್ಲಿ ಮಾತ್ರ ಕೆಲಸ ಮಾಡುತ್ತದೆ.
ವ್ಯಾಕ್ಯೂಮ್ ಕ್ಲೀನರ್ ಬಳಸಿದರೂ ಕೂಡ ಪ್ರತಿ ತಿಗಣೆ ಹಾಗೂ ಅದರ ಮೊಟ್ಟೆಯನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಅದರ ಮೊಟ್ಟೆಗಳನ್ನು ತೆಗೆಯುವುದು ತೀವ್ರ ಕಷ್ಟಕರವಾಗಿದೆ. ಹೀಗಾಗಿ, ವಾತಾವರಣವನ್ನು ಶುಚಿಯಾಗಿ ಇಟ್ಟುಕೊಂಡರೆ ತಿಗಣೆ ಕಾಟ ಮತ್ತಷ್ಟು ಹೆಚ್ಚಾಗದಂತೆ ತಡೆಯಬಹುದಾಗಿದೆ. ಅಲ್ಲದೆ, ವ್ಯಾಕ್ಯೂಮ್ ಮಾಡುವ ವೇಳೆ ಕಾರ್ಪೆಟ್, ಸೋಫಾ ಮುಂತಾದ ಭಾಗಗಳನ್ನು ಬಟ್ಟೆಯಿಂದ ಒರೆಸಿದರೆ ತಿಗಣೆಗಳ ಕಾಟದಿಂದ ಮುಕ್ತಿ ಪಡೆಯಲು ಮತ್ತಷ್ಟು ಪರಿಣಾಮಕಾರಿಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.