ಬೆಂಗಳೂರು: ಬಿಜೆಪಿಯಿಂದ ಸಚಿವ ವಿ.ಸೋಮಣ್ಣ ಹೊಗರೆ ಹೋಗಲು ನಡೆಸುತ್ತಿರುಯವ ಪ್ರಯತ್ನಗಳು ಹಾಗೂ ಈ ಕುರಿತ ಸುದ್ದಿಗಳಿಗೆ ಮೂಲ ಕಾರಣ ೀಗ ಬಹುತೇಕ ಸ್ಪಷ್ಠವಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣವಾಗ್ದಾಳಿ ನಡೆಸಿದ್ದಾರೆ.
ಮೂಡಲಪಾಲ್ಯದ ಕುರುಬರ ಸಂಘದ ಸಭೆಯಲ್ಲಿ ಅರುಣ್ ಸೋಮಣ್ಣ ಮಾತನಾಡಿದ ವಿಡಿಯೋ ತುಣುಕು ಎಲ್ಲೆಡೆ ಹರಿದಾಡುತ್ತಿದೆ.ನಮ್ಮ ಪಕ್ಷದಲ್ಲಿ ಬಹಳ ಹಿರಿಯ ನಾಯಕರಿದ್ದಾರೆ, ಅವರ ಸೀಟನ್ನೇ ತ್ಯಾಗ ಮಾಡಿ ಈಗ ಮಗನ್ನ ಕೂರಿಸುತ್ತಿದ್ದಾರೆ. ಕರ್ನಾಟಕಕ್ಕೆ ಅವನನ್ನೇ ನೆಕ್ಸ್ಟ್ ಲೀಡರ್ ಎನ್ನುತ್ತಿದ್ದಾರೆ. ಅವನಿಗೆ ಫೋನ್ ಮಾಡಿದರೆ ಏಕವಚನದಲ್ಲಿ ಮಾತನಾಡುವ ಮಹಾಪುರುಷ. ನನಗೂ ಹೀಗೆ ಮಾತನಾಡಲೂ ಬರುತ್ತದೆ ಎಂದು ನಾನೂ ಏಕವಚನದಲ್ಲಿ ಮಾತನಾಡಿದೆ ಎನ್ನುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡಿದನ್ನ ಅವರಿಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ನಾನು ಆ ಮನುಷ್ಯನ ಜೊತೆ ಮಾತನಾಡಿದ್ದು ನಿಜ.ನನಗೆ ಏಕವಚನದಲ್ಲಿ ಮಾತನಾಡಿದ್ರು, ನಾನು ಕೂಡ ಏಕವಚನದಲ್ಲಿ ಮಾತನಾಡಿದೆ. ನನ್ನ ಪ್ರಕಾರ ಕೂಲಿ ಕೆಲಸ ಮಾಡೋನಿಗೆ ಅವನಿಗೆ ಆದ ಗೌರವ ಇರುತ್ತೆ. ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತೆ ಎಂದರು.
ನನಗೂ ವಿಜೆಯೇಂದ್ರಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಅದು ಬಿಟ್ಟು ನಮ್ಮನ್ನು ತುಳಿಯಲು ಬಂದ್ರೆ ನಾನು ಸಹಿಸುವುದಿಲ್ಲ ಎಂದರು.
ಈ ವಿಡಿಯೋ ಲಿಂಕ್ ಹಿಂದೆ ಕೃಷ್ಣಪ್ಪ ಮತ್ತುಮಗನ ಸಹ ಕೈವಾಡವಿದೆ. ಜತೆಗೆ ನಮ್ಮ ಹಿತೈಷಿಗಳ ಕೈವಾಡ ಸಹ ಇರುತ್ತೆ. ನಾನು ವಿಜೆಯೇಂದ್ರ ಜೊತೆ ಚರ್ಚೆಗೆ ಸಿದ್ದನಿದ್ದೇನೆ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ನಾನು ಹೆದರುವುದು ನಮ್ಮ ತಂದೆ ತಾಯಿ ಮತ್ತು ದೇವರಿಗೆ ಅಷ್ಟೇ ಇನ್ಯಾರಿಗೂ ಹೆದರುವ ಮಾತೇ ಇಲ್ಲ ಎಂದು ಹೇಳಿದರು.