ಫಿಶ್ ಫ್ರೈ ರೆಸಿಪಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಭಾರತದ ಈ ಬಗೆಯ ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.
ಬೇಕಾಗುವ ಸಾಮಗ್ರಿಗಳು:
* ಮೀನು – 1 ಕೆಜಿ (ಬಾಂಗುಡೆ)
* ಕೆಂಪು ಮೆಣಸಿನಕಾಯಿ ಪುಡಿ – 5 ಚಮಚ
* ಅರಿಶಿಣ ಪುಡಿ- 1 ಚಮಚ
* ಶುಂಠಿ – ಸ್ವಲ್ಪ
* ಬೆಳ್ಳುಳ್ಳಿ- 1
* ರುಚಿಗೆ ತಕ್ಕಷ್ಟು ಉಪ್ಪು
* ತೆಂಗಿನ ಎಣ್ಣೆ
ಮಾಡುವ ವಿಧಾನ:
* ಮೀನನನ್ನು ಚೆನ್ನಾಗಿ ತೊಳೆದುಕೊಳ್ಳಿ
* ಕೆಂಪು ಮೆಣಸಿನಕಾಯಿ ಪುಡಿ, ಅರಿಶಿಣ ಪುಡಿ, ಉಪ್ಪು, ಶುಂಠಿ ಮತ್ತು ಬೆಳ್ಳುಳ್ಳಿ, 2 ಚಮಚ ತೆಂಗಿನಎಣ್ಣೆ ಜೊತೆಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ಈಗ, ಈ ಮಸಾಲೆ ಪೇಸ್ಟನ್ನು ಮೀನಿನ ಮೇಲೆ ಲೇಪಿಸಿ, ಹಾಗೂ 30 ನಿಮಿಷಗಳ ಕಾಲ ಇದು ನೆನೆಯಲು ಬಿಡಿ.
* ನಂತರ, ಒಂದು ಬಾಣಲೆಯನ್ನು ತೆಗೆದುಕೊಂಡು, ಅದರ ಮೇಲೆ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ. ನಂತರ ಮಸಾಲೆಯಲ್ಲಿ ನೆಂದ ಮೀನನ್ನು ಹಾಕಿ, ಡೀಪ್ ಫ್ರೈ ಮಾಡಿ.