ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿನ ಬೆಸ್ಟ್ ಜೋಡಿಗಳಲ್ಲಿ ಒಂದು ವಿರುಷ್ಕಾ ದಂಪತಿ. ಸದ್ಯ ವಿರಾಟ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದು ಈ ವೇಳೆಯೂ ಫ್ಯಾಮಿಲಿಗಾಗಿ ಸಮಯ ಮೀಸಲಿಟ್ಟಿದ್ದಾರೆ. ಪತಿಯನ್ನು ಪ್ರೋತ್ಸಾಹಿಸಲು ಬೆಂಗಳೂರಿಗೆ ಬಂದಿದ್ದ ಅನುಷ್ಕಾ ಪತಿಯೊಂದಿಗೆ ಹೋಟೆಲ್ ಗೆ ತೆರಳಿದ್ದಾರೆ.
ಸೆಂಟ್ರಲ್ ಟಿಫಿನ್ ರೂಮ್ನಲ್ಲಿ ದಕ್ಷಿಣ ಭಾರತದ ಆಹಾರವನ್ನು ಆನಂದಿಸಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ದಕ್ಷಿಣ ಭಾರತೀಯ ಆಹಾರವನ್ನು ಆನಂದಿಸಲು ಸೆಂಟ್ರಲ್ ಟಿಫಿನ್ ರೂಮ್ ಹೋಗಿದ್ದು, ಈ ವೇಳೆ ಎಲ್ಲರೂ ಸೌತ್ ಇಂಡಿಯನ್ ಫುಡ್ ಇಡ್ಲಿ, ದೋಸಾ, ವಡಾ ಸಾಂಬಾರ್ ಸವಿದಿದ್ದಾರೆ.
ಅನುಷ್ಕಾ ಶರ್ಮಾ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದ ಕೆಲವು ಫೋಟೋಗಳನ್ನು Instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ – ಅನುಷ್ಕಾ ಪೋಷಕರೊಂದಿಗೆ ನಿಂತಿದ್ದಾರೆ . ಈ ಊಟದ ನಂತರ, ಅನುಷ್ಕಾ ಐಸ್ ಕ್ರೀಮ್ ಅನ್ನು ಸವಿದಿದ್ದಾರೆ ಮತ್ತು ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇಲ್ಲಿ ವಿಶೇಷ ಏನೆಂದರೆ ಅನುಷ್ಕಾ ಶರ್ಮಾ ಕ್ರಂಚಿಯಾಗಿರುವ ಮಸಾಲೆ ದೋಸೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಹದವಾಗಿ ಕಾದಿರುವಂತಹ ಮಸಾಲೆ ದೋಸೆ ಹಾಗೂ ಅದರ ಜೊತೆ ತೆಂಗಿನಕಾಯಿ ಚಟ್ನಿ ಇರುವುದನ್ನು ಕಾಣಬಹುದು. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಗೋಳಿಬಜೆಯನ್ನು ಕೂಡ ತಿಂದಿದ್ದಾರೆ. ಅನುಷ್ಕಾ ಶರ್ಮಾ ಸಿಟಿಆರ್ನ ಮೆನು ಫೋಟೋವನ್ನು ಸಹ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಮಸಾಲೆ ದೋಸೆ, ಗೋಳಿಬಜೆ, ಕೇಸರಿಬಾತ್ ಬೆಲೆ ತೋರಿಸಲಾಗಿದೆ. ಅನುಷ್ಕಾ ಶರ್ಮಾ ಅವರು ತಿಂದ ಮಸಾಲೆ ದೋಸೆ ಬೆಲೆ 70 ರೂಪಾಯಿ, ಕೇಸರಿಬಾತ್ ಬೆಲೆ 40 ರೂಪಾಯಿ, ಮಂಗಳೂರು ಬಜ್ಜಿ 50 ರೂಪಾಯಿ ಇದೆ.