ಬೆಂಗಳೂರು : ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 2.73 ರಷ್ಟು ಹೆಚ್ಚಳ ಮಾಡಿ ಶೇಕಡಾ 21.17 ಕ್ಕೆ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಡೀಸೆಲ್ ದರ ಪ್ರತಿ ಲೀಟರ್ಗೆ 2 ರೂ.ನಷ್ಟು ಹೆಚ್ಚಳವಾಗಿದೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿತ್ತು. ಹಾಗಾಗಿ ಏಪ್ರಿಲ್ 1 ರಿಂದಲೇ ಹೊಸ ದರ ಅಸ್ತಿತ್ವಕ್ಕೆ ಬಂದಿದೆ.
ದರ ಪರಿಷ್ಕರಣೆಯೊಂದಿಗೆ, ಕರ್ನಾಟಕದಲ್ಲಿ ಇದೀಗ ಡೀಸೆಲ್ ಬೆಲೆ ಈಗ ಪ್ರತಿ ಲೀಟರ್ಗೆ 91.02 ರೂ. ಆಗಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ 88.99 ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಈ ಹಿಂದೆ ರಾಜ್ಯದಲ್ಲಿ ಡೀಸೆಲ್ ದರ ಹೆಚ್ಚಿತ್ತು. ತೆರಿಗೆ ಹೆಚ್ಚಿದ್ದ ಕಾರಣ ಡೀಸೆಲ್ ದರ ಕೂಡ ಹೆಚ್ಚಿತ್ತು. ನಂತರ ಹಲವು ಬಾರಿ ತೆರಿಗೆ ಕಡಿಮೆ ಮಾಡಲಾಗಿತ್ತು. ಈ ಹಿಂದಿನ 2 ವರ್ಷಗಳ ತೆರಿಗೆ ಪ್ರಮಾಣಕ್ಕೆ ಹೋಲಿಸಿದರೆ ಈಗ ಡೀಸೆಲ್ ದರ ಕಡಿಮೆಯೇ ಇದೆ ಎಂದು ಸರ್ಕಾರ ಹೇಳಿದೆ.
ಅಗತ್ಯ ವಸ್ತುಗಳು ಹಾಗೂ ಸೇವೆಗಳ ದರ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ. ಗ್ಯಾರಂಟಿ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 2 ರೂ. ಏರಿಕೆ ಮಾಡಿದ್ದು, ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಬರೆ ಎಳೆದಂತಾಗಿದೆ.
ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44% ರಿಂದ 21.17 % ಗೆ ಏರಿಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ಗೆ 88.93 ರೂ. ದರವಿದೆ. ತೆರಿಗೆ ಏರಿಕೆಯಿಂದ ದರ 90.93 ರೂ.ಗೆ ಆಗಲಿದೆ. ಪೆಟ್ರೋಲ್ ಮೇಲೆ ಮಾರಾಟ ತೆರಿಗೆಯನ್ನು ಏರಿಸದ ಕಾರಣ ಪ್ರತಿ ಲೀಟರ್ ಪೆಟ್ರೋಲ್ ದರ 102. 84 ರೂ.ಇರಲಿದೆ.
