ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಈ ತಿನಿಸನ್ನು ಸುಲಭವಾಗಿ ಬಹುಬೇಗ ಮಾಡಬಹುದು. ಸಂಜೆ ಅಥವಾ ನಿಮಗೆ ಕುರುಕಲು ಬೇಕು ಎಂದಾದಾಗ ನಿಮಗೆ ತಿನ್ನಲು ಸಿದ್ಧಪಡಿಸಿಕೊಳ್ಳಬಹುದಾದ ಉತ್ತಮ ರೆಸಿಪಿ ಇಲ್ಲಿದೆ.
- ಮೊದಲಿಗೆ ನೀವು ಶೇಂಗಾ/ ಕಡಲೆ ತೆಗದುಕೊಳ್ಳಿ ಅದರ ಸಿಪ್ಪೆಗಳನ್ನು ಬಿಡಿಸಿ ಚೆನ್ನಾಗಿ ಹುರಿದುಕೊಳ್ಳಿ.
- ಅದನ್ನು ಆರಲು ಬಿಡಿ.
- ಬಿಸಿ ಇರುವಾಗ ಇದು ತುಂಬಾ ಕ್ರಂಚಿಯಾಗಿರುತ್ತದೆ. ಇನ್ನು ನಂತರ ಒಂದು ಬೌಲ್ನಲ್ಲಿ ಖಾರದಪುಡಿ, ಜೀರಿಗೆ ಪುಡಿ, ಧನಿಯಾಪುಡಿ ಹಾಕಿಕೊಳ್ಳಿ.
- ಬೌಲ್ನಲ್ಲಿ ಹಾಕಿಟ್ಟುಕೊಂಡ ನಂತರ ಅದಕ್ಕೆ ಉಪ್ಪು ಸೇರಿಸಿ ಎಣ್ಣೆ ಹಾಕಿ ಅವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕಡಲೆ ಹಿಟ್ಟಿಗೆ ಅದನ್ನು ಹಾಕಿ.
- ನಂತರ ಕಲಿಸಿಟ್ಟುಕೊಂಡ ಕಡಲೇ ಹಿಟ್ಟಿನಲ್ಲಿ ಗಂಟಿಲ್ಲದಂತೆ ನೋಡಿಕೊಳ್ಳಿ. ನಂತರ ಆ ಹಿಟ್ಟಿನಲ್ಲಿ ಶೇಂಗಾ ಬೀಜಗಳನ್ನು ಹಾಕಿ.
- ನಂತರ ಆ ಶೇಂಗಾ ಬೀಜಗಳು ಬಿಡಿ ಬಿಡಿಯಾಗಿರುವಂತೆ ನೋಡಿಕೊಂಡು ಅದನ್ನು ಎಣ್ಣೆಯಲ್ಲಿ ಕರಿಯಿರಿ ಇದರಿಂದ ಒಂದಕ್ಕೊಂದು ಕೂಡುವುದಿಲ್ಲ.
- ಚಹಾ ಜೊತೆಗೆ ಅಥವಾ ಮಕ್ಕಳು ಶಾಲೆಯಿಂದ ಬಂದ ನಂತರ ಏನಾದರೂ ತಿನ್ನಲು ಬಯಸುತ್ತಾರೆ ಆಗ ನೀವಿದನ್ನು ಕೊಡಬಹುದು.