ಸಾಕಷ್ಟು ಬಾರಿ ನಮ್ಮ ಸಣ್ಣ ತಪ್ಪಿನಿಂದಾಗಿ ಪಾತ್ರೆಯಲ್ಲಿರುವ ಹಾಲು ಉಕ್ಕಿ ಬಂದು ಸ್ಟವ್ ಕೊಳಕಾಗುತ್ತದೆ. ಇನ್ನೂ ಉಕ್ಕಿ ಬಂದ ಹಾಲನ್ನು ಹಾಗೆ ಬಿಟ್ಟರೆ, ಒಣಗಿ ಹೋಗುತ್ತದೆ. ನಂತರ ಇದನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ಆದ್ದರಿಂದ ಕೆಲ ಮಂದಿ ಹಾಲು ಕಾಯಿಸುವಾಗ ಸ್ಟವ್ ಬಿಟ್ಟು ಕದಲುವುದಿಲ್ಲ.
ಆದರೆ ನಾವಿಂದು ಹಾಲು ಕಾಯಿಸಿದ ನಂತರ ಸಹ ಪಾತ್ರೆಯಿಂದ ಉಕ್ಕಿ ಹೊರಗೆ ಚೆಲ್ಲದಂತೆ ನೋಡಿಕೊಳ್ಳುವುದು ಹೇಗೆ ಎಂಬುವುದರ ಬಗ್ಗೆ ಕೆಲ ಟಿಪ್ಸ್ ನೀಡುತ್ತೇವೆ. ಇನ್ಮುಂದೆ ನೀವು ಈ ವಿಧಾನವನ್ನು ಅನುಸರಿಸುವ ಮೂಲಕ ಹಾಲನ್ನು ಸುಲಭವಾಗಿ ಕಾಯಿಸಬಹುದು.
ಮೊದಲನೇಯದಾಗಿ ಹಾಲನ್ನು ಯಾವಾಗಲೂ ಬಿಸಿ ಮಾಡುವ ಪಾತ್ರೆಯ ಸಂಪೂರ್ಣ ಮೇಲ್ಭಾಗವನ್ನು ತೇವಗೊಳಿಸಿ. ಪಾತ್ರೆಯನ್ನು ಎಲ್ಲಾ ಕಡೆಯೂ ನೀರಿನಿಂದ ತೇವಗೊಳಿಸಿ, ನಂತರ ಹಾಲನ್ನು ಪಾತ್ರೆಗೆ ಹಾಕಿ. ಈಗ ಈ ಹಾಲನ್ನು ಕಾಯಿಸಲು ಇಡಿ. ಆಗ ಹಾಲು ತಳಕ್ಕೆ ಅಂಟಿಕೊಳ್ಳುವುದಿಲ್ಲ ಮತ್ತು ಸೀದು ಹೋದ ವಾಸನೆ ಬರುವುದಿಲ್ಲ.
ಹಾಲು ಉಕ್ಕುವುದನ್ನು ತಡೆಯಲು ನೀವು ಬೆಣ್ಣೆಯನ್ನು ಕೂಡ ಸೇರಿಸಬಹುದು. ಇದಕ್ಕಾಗಿ ಪಾತ್ರೆಯ ಅಂಚುಗಳ ಮೇಲೆ ಬೆಣ್ಣೆಯನ್ನು ಹಚ್ಚಿ. ಜೊತೆಗೆ ಪ್ಯಾನ್ ಸುತ್ತಲೂ ಬೆಣ್ಣೆಯನ್ನು ಹಚ್ಚಲು ಮರೆಯಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ಹಾಲು ಉಕ್ಕಿ ಬರುವುದು ಮತ್ತು ಪಾತ್ರೆಗೆ ಅಂಟಿಕೊಳ್ಳುವುದನ್ನು ತಪ್ಪಿಸಬಹುದು. ನೀವು ಈ ವಿಧಾನ ಅನುಸರಿಸುವ ಮೂಲಕ ಹಾಲು ಉಕ್ಕಿ ಬರದಂತೆ ತಡೆಯಲು ಚಮಚದಿಂದ ಪಾತ್ರೆಯಲ್ಲಿ ಹಾಲನ್ನು ಅಲುಗಾಡಿಸುವುದು ಮತ್ತು ಸ್ಟವ್ ಮುಂದೆ ನಿಂತುಕೊಳ್ಳುವ ಕೆಲಸ ಬರುವುದಿಲ್ಲ. ಹಾಲನ್ನು ಬಿಸಿ ಮಾಡುವಾಗ, ಸ್ಟವ್ ಉರಿ(ಜ್ವಾಲೆ)ಯನ್ನು ತುಂಬಾ ಕಡಿಮೆ ಇರಿಸಿ. ಹೀಗೆ ಮಾಡುವುದರಿಂದ ಹಾಲು ಕುದಿಯಲು ಪ್ರಾರಂಭಿಸುತ್ತದೆ. ಆದರೆ ಪಾತ್ರೆಯಿಂದ ಉಕ್ಕಿ ಹೊರ ಬರುವುದಿಲ್ಲ. ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಹಾಲನ್ನು ಈ ರೀತಿ ಕಾಯಿಸಿದರೆ ಚಿಂತಿಸುವ ಅಗತ್ಯವಿರುವುದಿಲ್ಲ. ಆದ್ದರಿಂದ, ಹಾಲನ್ನು ಬಿಸಿಮಾಡುವಾಗ, ಅದು ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಬಾರಿ ಪರಿಶೀಲಿಸಿ.
ಹಾಲು ಕುದಿಸಬೇಕಾದ ಸಮಯ: ಹಾಲು ಕುಡಿಯುವ ಮುನ್ನ ಪ್ಯಾಕ್ ಮಾಡಿದ ಹಾಲನ್ನು ಚೆನ್ನಾಗಿ ಬಿಸಿ ಮಾಡುವುದು ಉತ್ತಮ. ಹಾಗಂತ 10 ನಿಮಿಷಗಳಿಗಿಂತ ಹೆಚ್ಚು ಕಾಲ ಹಾಲನ್ನು ಕುದಿಸಬೇಡಿ. ಮಧ್ಯಮ ಉರಿಯಲ್ಲಿ 5-10 ನಿಮಿಷಗಳ ಕಾಲ ಹಾಲನ್ನು ಕುದಿಸಿ ಅಗತ್ಯವಾದ ಪೋಷಕಾಂಶಗಳನ್ನು ಕಾಪಾಡಿಕೊಳ್ಳುವತ್ತ ಕಾಳಜಿ ವಹಿಸಬೇಕು. ನಂತರ ಹಾಲನ್ನು ಸ್ವಲ್ಪ ತಣ್ಣಗಾಗಿಸಬಹುದು ಮತ್ತು ಫ್ರಿಜ್ನಲ್ಲಿ ಕೂಡ ಇರಿಸಬಹುದು. ಆದರೆ ಪಾಶ್ಚರೀಕರಿಸಿದ ಹಾಲನ್ನು ಕುದಿಸುವ ಬದಲು ನಿಧಾನವಾಗಿ ಬೆಚ್ಚಗಾಗಿಸಿ.
ಹಾಲಿಗೆ ನೀರು: ಪ್ಯಾಕೇಜ್ ಮಾಡಿದ ಹಾಲು ಅಥವಾ ಹಸಿ ಹಾಲನ್ನು ಕುದಿಸುವ ಮೊದಲು 1/4 ಭಾಗ ಶುದ್ಧ ನೀರನ್ನು ಮಿಶ್ರಣ ಮಾಡಿ. ಇದು ಹಾಲಿನ ಪೌಷ್ಟಿಕಾಂಶದ ಗುಣಮಟ್ಟವನ್ನು ಕಾಪಾಡುತ್ತದೆ. ಆದರೆ ಹಾಲನ್ನು ಹೆಚ್ಚು ಹೊತ್ತು ಕುದಿಸಬೇಡಿ, ಹಾಲು ಕುದಿಸಿದ ನಂತರ ಹೆಚ್ಚು ಹೊತ್ತು ತೆರೆದ ಸ್ಥಳದಲ್ಲಿ ಇಡಬೇಡಿ.