ಕಳೆದ 11 ವರ್ಷಗಳಿಂದ ಬಿಗ್ ಬಾಸ್ ನಿರೂಪಣೆ ಮಾಡುತ್ತ ಬಂದಿರುವ ಕಿಚ್ಚ ಸುದೀಪ್ ಇದೀಗ ಏಕಾಏಕಿ ಬಿಗ್ ಬಾಸ್ ನಿರೂಪಣೆ ತೊರೆಯುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸುದೀಪ್ ಅಧಿಕೃತ ಹೇಳಿಕೆ ನೀಡಿದ್ದು ಇದು ಪ್ರತಿಯೊಬ್ಬರಿಗೂ ಆಕ್ ಆಗಿದೆ. ಸುದೀಪ್ ಅವರ ಏಕಾಏಕಿ ನಿರ್ಧಾರದ ಹಿಂದೆ ದೊಡ್ಡ ಕಾರಣ ಇದೆ ಎನ್ನಲಾಗುತ್ತಿದ್ದು ಈ ಬಗ್ಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.
ಬಿಗ್ ಬಾಸ್ 10 ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದ ಕಿಚ್ಚ ಸುದೀಪ್ ಇದೀಗ 11ನೇ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. 11ನೇ ಸೀಸನ್ ನಿರೂಪಣೆಯಿಂದಲೇ ಸುದೀಪ್ ಹೊರ ಬರುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ವಾಹಿನಿಯವರು ಮನ ವೊಲಿಸಿ ಮತ್ತೆ ನಿರೂಪಣೆ ಮಾಡುವಂತೆ ಮಾಡಿದ್ದರು. ಆದರೆ ಇದೀಗ ಸುದೀಪ್ ನಿರೂಪಣೆಯಿಂದ ಹೊರ ಬರಲು ನಿರ್ಧಾರ ಮಾಡಿದ್ದಾರೆ. ಸುದೀಪ್ ಈ ಘೋಷಣೆ ಮಾಡುವುದರ ಹಿಂದೆ ಯಾವುದೋ ಒಂದು ಬಲವಾದ ಕಾರಣವೇ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.
‘ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೆ ನಿಮ್ಮ ಆಟಕ್ಕೆ ಸುದೀಪ್ ನಿರೂಪಣೆ ನಿಲ್ಲಿಸಬೇಕಾಯಿತು. ಅವರಿಗೆ ಮಾಡಿದ ಅವಮಾನ ಸಹಿಸುವುದಿಲ್ಲ. ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕರೇ ಮೊದಲು ಬಿಗ್ ಬಾಸ್ ಬಿಡಿ, ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ’ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರ. ಕನ್ನಡದ ಪರವಾಗಿ ಅವರು ಧ್ವನಿ ಎತ್ತುತ್ತಾರೆ. ಅವರು ಈ ಮೊದಲು ಬಿಗ್ ಬಾಸ್ಗೂ ಹೋಗಿ ಬಂದಿದ್ದಾರೆ. ಹೀಗಾಗಿ, ಅವರ ಜನಪ್ರಿಯತೆ ಹೆಚ್ಚಿದೆ. ಅಸಲಿಗೆ ಬಿಗ್ ಬಾಸ್ನಲ್ಲಿ ಏನಾಯ್ತು? ಅಲ್ಲಿ ನಡೆದ ಘಟನೆ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇಂದು (ಅಕ್ಟೋಬರ್ 14) ರೂಪೇಶ್ ರಾಜಣ್ಣ ಈ ಬಗ್ಗೆ ಘೋಷಣೆ ಮಾಡೋ ಸಾಧ್ಯತೆ ಇದೆ.