ಬೆಂಗಳೂರು ;- ಪತ್ನಿ ಇರುತ್ತಿದ್ದ ಕೋಣೆಯಲ್ಲಿಯೇ ತನ್ನ ಸಹೋದರನಿಗೆ ಮಲಗಲು ಅನುಮತಿಸುತ್ತಾ ಪತ್ನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಪತಿಯ ಕ್ರೌರ್ಯ ತಾಳದೆ ಆತನೊಂದಿಗೆ ವಿಚ್ಛೇದನ ಕೋರಿದ ಮನವಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ದಂಪತಿಯ ವಿವಾಹ ಅನೂರ್ಜಿತಗೊಳಿಸಿ ನೊಂದ ಮಹಿಳೆಗೆ ನೆಮ್ಮದಿ ಕರುಣಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ವಿಜಯ್ಕುಮಾರ್ ಎ. ಪಾಟೀಲ್ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪತಿಯ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಮೇಲ್ಮನವಿದಾರೆ ನಿರ್ದಿಷ್ಟಆರೋಪ ಮಾಡಿ, ಹಲವು ಸಾಕ್ಷ್ಯಾಧಾರ ಒದಗಿಸಿದ್ದರು. ಆದರೆ ಪತ್ನಿಯ ಆರೋಪಗಳಿಗೆ ವಿರುದ್ಧವಾದ ಯಾವುದೇ ಸಾಕ್ಷ್ಯಧಾರಗಳನ್ನೂ ಪತಿ ಒದಗಿಸಿಲ್ಲ. ಇದರಿಂದ ಪತ್ನಿಯ ಆರೋಪಗಳು ನಿಜವೆಂದು ತೋರುತ್ತದೆ. ಹೀಗಿದ್ದರೂ ಪತ್ನಿಯ ಮನವಿ ಹಾಗೂ ಸಾಕ್ಷ್ಯಗಳನ್ನು ತಿರಸ್ಕರಿಸಿ ವಿಚ್ಛೇದನ ಕೋರಿದ ಅರ್ಜಿ ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಕ್ರಮ ದೋಷಪೂರಿತವಾಗಿದೆ. ಪ್ರಕರಣದಲ್ಲಿ ಕ್ರೌರ್ಯದ ಆಧಾರದ ಮೇಲೆ ಮೇಲ್ಮನವಿದಾರೆಗೆ ವಿಚ್ಛೇದನ ಮಂಜೂರು ಮಾಡಬಹುದಾಗಿದೆ ಎಂದ ಹೈಕೋರ್ಟ್, ಮೇಲ್ಮನವಿದಾರೆಯ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಕಲ್ಪಿಸಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)