ಬೆಂಗಳೂರು: ಇಂದಿನಿಂದ ಮೇ. 20 ರ ತನಕ ಬೆಂಗಳೂರು ಸೇರಿ ರಾಜ್ಯದ ಹೈಕೋರ್ಟ್ (High Court) ಪೀಠಗಳಿಗೆ ಬೇಸಿಗೆ ರಜೆ (summer vacation)ಇರಲಿದೆ. ಬೇಸಿಗೆ ರಜೆಯ ದಿನಾಂಕಗಳನ್ನು ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಪ್ರಕಟಿಸಲಾಗಿದೆ. ಎಂ. ಚಂದ್ರಶೇಖರ ರೆಡ್ಡಿ(M. Chandrasekhara Reddy) ಈ ಕುರಿತು ಅಧಿಸೂಚನೆ ಪ್ರಕಟಿಸಿದ್ದಾರೆ.
ಬೇಸಿಗೆ ರಜೆ(summer vacation) ಅವಧಿಯಲ್ಲಿ ಬೆಂಗಳೂರಿನ(Bangalore) ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡದ ಪೀಠಗಳಲ್ಲಿ ಒಟ್ಟು 8 ದಿನಗಳ ಕಾಲ ಮಾತ್ರ ವಿಚಾರಣೆ ನಡೆಯಲಿದೆ. ಇಂದಿನಿಂದ ಮೇ 20ರ ತನಕ (High Court)ಹೈಕೋರ್ಟ್ ಬೇಸಿಗೆ ರಜೆ ಇರಲಿದೆ. ರಜೆ ಅವಧಿಯಲ್ಲಿ ಏಪ್ರಿಲ್ 25, 27, ಮೇ 2, 4, 9, 11, 16 ಮತ್ತು 18ರಂದು ಒಂದು ವಿಭಾಗೀಯ ಪೀಠ ಮತ್ತು ಎರಡು ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಿವೆ.
ಅಧಿಸೂಚನೆಯಲ್ಲಿ ಬೇಸಿಗೆ ರಜೆ ಕಾಲದ ವಿಶೇಷ ಪೀಠಗಳು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಿವೆ. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ ಸ್ವರೂಪದ ಅರ್ಜಿಗಳನ್ನು ವಿಚಾರಣೆ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ.ರಜಾ ಕಾಲದ ಪೀಠಗಳು ತುರ್ತು ವಿಚಾರಣೆ ಕೋರಿ ಸಲ್ಲಿಸುವ, ತಡೆಯಾಜ್ಞೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ.