ಮುಂಬೈ: ಇದೇ ಮೊದಲಬಾರಿಗೆ ಭಾರತ (India) ಸಂಪೂರ್ಣ ಆತಿಥ್ಯದಲ್ಲಿ 2023ರ ವಿಶ್ವಕಪ್ (ICC WorldCup) ಟೂರ್ನಿ ಆಯೋಜಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಭಾರತ – ಪಾಕಿಸ್ತಾನ ಕದನಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೆಲ ಅಭಿಮಾನಿಗಳಂತೂ ಮೂರು ತಿಂಗಳಿಗೆ ಮುಂಚೆಯೇ ಇಂಡೋ-ಪಾಕ್ (IND vs Pak) ಕದನ ವೀಕ್ಷಿಸಲೆಂದೇ ಅಹಮದಾಬಾದ್ನಲ್ಲಿ ಹೋಟೆಲ್ ರೂಂಗಳನ್ನ ಕಾಯ್ದಿರಿಸಿದ್ದಾರೆ, ಟ್ವಿಟ್ಟರ್ನಲ್ಲೂ ಟ್ರೆಂಡ್ ಅಲೆ ಎದ್ದಿದೆ.
ಇಂಡೋ ಪಾಕ್ ಕದನ ಯಾವಾಗಲೂ ರಣ ರೋಚಕತೆಯಿಂದ ಕೂಡಿರುತ್ತದೆ. ಅದಕ್ಕಾಗಿ ಅತ್ಯಂತ ದುಬಾರಿ ಬೆಲೆಗೆ ಟಿಕೆಟ್ಗಳನ್ನ ಮಾರಾಟ ಮಾಡಲಾಗುತ್ತಿದೆ. ಆದರೂ ಹಿಂದೆಂದಿಗಿಂತಲೂ ಅತ್ಯಧಿಕ ಬೆಲೆಗೆ ಟಿಕೆಟ್ಗಳನ್ನ ಖರೀದಿಸುವಲ್ಲಿ ಅಭಿಮಾನಿಗಳು ನಿರತರಾಗಿದ್ದಾರೆ. ವಿವಿಧ ಹಂತಗಳಲ್ಲಿ 60 ಸಾವಿರದಿಂದ 1 ಲಕ್ಷ ರೂ, 18 ರಿಂದ 22 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದ್ರೆ ಆನ್ಲೈನ್ ಸ್ಫೋರ್ಟ್ಸ್ ಟಿಕೆಟ್ ಪ್ಲಾಟ್ಫಾರ್ಮ್ ವಿಯಾಗೊದಲ್ಲಿ 56 ಲಕ್ಷ ರೂ.ವರೆಗೆ ಟಿಕೆಟ್ ಮಾರಾಟವಾಗಿದ್ದು, ಅಭಿಮಾನಿಗಳನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೆಲವರು ಹಣ ಕೊಟ್ಟರೂ ಟಿಕೆಟ್ ಸಿಗದೇ ನಿರಾಸೆ ಅನುಭವಿಸುತ್ತಿದ್ದಾರೆ.
ಅಕ್ಟೋಬರ್ 15 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಇಂಡೋ ಪಾಕ್ ಕದನ ಭದ್ರತಾ ಕಾರಣಗಳಿಂದ ಅಕ್ಟೋಬರ್ 14ಕ್ಕೆ ಬದಲಾವಣೆಗೊಂಡಿದೆ. ಸ್ಟೇಡಿಯಂನಲ್ಲಿ ಸೌತ್ ಪ್ರೀಮಿಯಂನ ವೆಸ್ಟ್-2 ಬ್ಲಾಕ್ನ ಪ್ರತಿ ಟಿಕೆಟ್ ಬೆಲೆ 19 ಲಕ್ಷ ರೂ.ಗಿಂತಲೂ ಹೆಚ್ಚಿಗೆಗೆ ಮಾರಾಟವಾಗ್ತಿದೆ. ಇದಕ್ಕೆ ಆಕ್ರೋಶಗೊಂಡಿರುವ ಕೆಲವು ಅಭಿಮಾನಿಗಳು 1.32 ಲಕ್ಷ ಟಿಕೆಟ್ಗಳಲ್ಲಿ ಎಷ್ಟು ಟಿಕೆಟ್ ಮಾರಾಟವಾಗಿದೆ ಎಂಬುದನ್ನ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.