ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಕುರಿತು ವಿಪಕ್ಷ ಬಿಜೆಪಿ ಟ್ವೀಟ್( State BJP) ಮಾಡಿದ್ದು, ಇದು ಎಟಿಎಂ ಸರ್ಕಾರದ ಕಲೆಕ್ಷನ್ ಬಜೆಟ್ ಎಂದು ಜರಿದಿದೆ. ಅಲ್ಲದೆ, ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ ಇದಾಗಿದ್ದು, ಕರ್ನಾಟಕ ಇತಿಹಾಸದಲ್ಲೇ ಈಗ ಅತಿ ಹೆಚ್ಚು ಸಾಲ ಮಾಡಿದ್ದಾರೆ.
ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ ಅನುತ್ಪಾದಕ ವಲಯಕ್ಕೆ ಮೀಸಲು ಎಂದು ಹೇಳಿದೆ. ಆದಾಯ ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ ಕೇವಲ ಸಾಲದ ಹೊರೆಯನ್ನು ಹೇರಿಕೆ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ, ಎಟಿಎಂ ಸರ್ಕಾರದ ಸಾಲರಾಮಯ್ಯ ಎಂದೂ ಹೇಳಿದೆ.