ಇತ್ತೀಚೆಗೆ ಸುರಿದ ಭಾರಿ ಮಳೆಗೆ ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿತದಿಂದ ಇದುವರೆಗೂ 48 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರೀ ಮಳೆಯಿಂದಾಗಿ ಮೀಝೌ ನಗರದಿಂದ ಡಾಬು ಕೌಂಟಿಯ ಕಡೆಗೆ ಚಲಿಸುವ ರಸ್ತೆಯು ಕುಸಿತ ಕಂಡಿದೆ.
ವಾಹನಗಳು ಟಾರ್ಮ್ಯಾಕ್ನಲ್ಲಿ ಸುಮಾರು 18 ಮೀಟರ್ ಉದ್ದದ (59-ಅಡಿ) ಗಾಶ್ಗೆ ಸಿಲುಕಿ, ಕಡಿದಾದ ಇಳಿಜಾರಿನಲ್ಲಿ ಕೆಳಗೆ ಬಿದ್ದಿದ್ದು ಘಟನೆಯಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ.
ದಟ್ಟವಾದ ಜನನಿಬಿಡ ಕೈಗಾರಿಕಾ ಶಕ್ತಿ ಕೇಂದ್ರವಾದ ಗುವಾಂಗ್ಡಾಂಗ್, ಇತ್ತೀಚಿನ ವಾರಗಳಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಸಂಭವಿಸಿದ ವಿಪತ್ತುಗಳ ಸರಮಾಲೆಯಿಂದ ಹಾನಿಗೊಳಗಾಗಿದೆ. ಚಂಡಮಾರುತಗಳು ವರ್ಷದಲ್ಲಿ ನಿರೀಕ್ಷೆಗಿಂತ ಹೆಚ್ಚು ಭಾರೀ ಪ್ರಮಾಣದಲ್ಲಾಗಿವೆ. ಹವಾಮಾನ ಬದಲಾವಣೆಗೆ ಸಂಭವಿಸುತ್ತಿವೆ. ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಹಸಿರುಮನೆ ಅನಿಲಗಳ ಅತಿದೊಡ್ಡ ಹೊರಸೂಸುವಿಕೆ ದೇಶ ಚೀನಾ. 2060 ರ ವೇಳೆಗೆ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತಗ್ಗಿಸಲು ರಾಷ್ಟ್ರ ಪ್ರತಿಜ್ಞೆ ಮಾಡಿದೆ.
ಗುರುವಾರ ಬೆಳಗ್ಗೆ ಹೆದ್ದಾರಿ ಕುಸಿತದಿಂದ 36 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮೃತರ ಸಂಖ್ಯೆ 48 ಕ್ಕೆ ಏರಿಕೆಯಾಗಿದ್ದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.