ಬಾಲಿವುಡ್ ನ ಖ್ಯಾತ ನಟಿ ಹೀನಾ ಖಾನ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ತಾವು ಸ್ತನ ಕ್ಯಾನ್ಸರ್ ನ ಮೂರನೇ ಹಂತದಲ್ಲಿದ್ದು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ನಟಿ ಕೆಲವು ದಿನಗಳ ಹಿಂದಷ್ಟೇ ಹೇಳಿಕೊಮಡಿದ್ದರು. ಇದೀಗ ಹೀನಾ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದಾರೆ.
ಹೀನಾ ಖಾನ್ ಸ್ಟೇಜ್ ಶೋದಿಂದ ನೇರವಾಗಿ ಕಿಮೋ ಥಿಯೇಟರ್ ಗೆ ಎಂಟ್ರಿ ಕೊಡೋ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ನಾನು ಗಟ್ಟಿಯಾಗಿದ್ದೇನೆ ಮತ್ತು ಈ ಕಾಯಿಲೆಯಿಂದ ಹೊರಬರಲು ನಿರ್ಧರಿಸಿ ಹೋರಾಟ ಆರಂಭಿಸಿದ್ದೇನೆ ಎಂದಿದ್ದಾರೆ.
ರಿಯಾಲಿಟಿ ಶೋ, ಸೀರಿಯಲ್, ಮಾಡೆಲಿಂಗ್ ಹೀಗೆ ಬ್ಯುಸಿ ಶೆಡ್ಯೂಲ್ ಲೈಫ್ ನಲ್ಲಿ ಬ್ಯುಸಿಯಾಗಿದ್ದ ಹೀನಾ ಖಾನ್ ಗೆ ಕಳೆದ ಒಂದು ವಾರದ ಹಿಂದೆಯಷ್ಟೇ ವೈದ್ಯಕೀಯ ಪರೀಕ್ಷೆ ಕ್ಯಾನ್ಸರ್ ಇದೆ ಅನ್ನೋ ಕಹಿಸತ್ಯವನ್ನು ತಿಳಿಸಿದೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹೊರಜಗತ್ತಿನಿಂದ ಮುಚ್ಚಿಡುತ್ತಾರೆ. ಆದರೆ ಹೀನಾಖಾನ್ ಎಲ್ಲರಿಗಿಂತ ಭಿನ್ನವಾಗಿ ಕ್ಯಾನ್ಸರ್ ಎದುರಿಸಲು ಸಜ್ಜಾಗಿದ್ದಾರೆ.
ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ನಾನು ನನ್ನ ಬದುಕಿನ ಅತಿದೊಡ್ಡ ಹೋರಾಟದ ಘಟ್ಟದಲ್ಲಿದ್ದೇನೆ. ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ. ಆದರೆ ನನ್ನ ವೈಯಕ್ತಿಕ ಘನತೆಯನ್ನು ಗೌರವಿಸಿ, ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದರು. ಮಾತ್ರವಲ್ಲ ಹೀನಾ ಖಾನ್ ತಮ್ಮ ಸ್ಟೇಜ್ ಶೋಗಳಿದ್ದು, ಅವುಗಳನ್ನು ಮುಗಿಸಿ ಮೊದಲ ಕಿಮೋಥೇರಫಿಗೆ ಒಳಗಾಗುವುದಾಗಿ ಪೋಸ್ಟ್ ಹಾಕಿದ್ದರು.
ಕಿಮೋಥೆರಫಿಯಿಂದ ಸಹಜವಾಗಿಯೇ ಕೂದಲು ಉದುರುತ್ತದೆ. ಹೀಗಾಗಿ ತಮ್ಮ ಸಿಲ್ಕಿ ಹೇರ್ ಸುಮ್ಮನೇ ಉದುರ ವ್ಯರ್ಥವಾಗುವ ಬದಲು ವಿಗ್ ಆಗುವ ಮೂಲಕ ಅಗತ್ಯ ಇದ್ದವರಿಗೆ ಬಳಕೆಯಾಗಲಿ ಅನ್ನೋದು ಹೀನಾ ಆಸೆ. ಅದಕ್ಕಾಗಿ ಹೀನಾ ತಮ್ಮ ಕೂದಲು ದಾನ ಮಾಡಿದ್ದು ಆ ವಿಡಿಯೋವನ್ನು ಇನ್ ಸ್ಟಾಂಗ್ರಾನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹೀನಾ ನಡೆಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದು ಆದಷ್ಟು ಬೇಗ ಕ್ಯಾನ್ಸರ್ ಗೆದ್ದು ಬನ್ನಿ ಎಂದು ಶುಭ ಹಾರೈಸಿದ್ದಾರೆ.