ನವದೆಹಲಿ: ಅದಾನಿ ಗ್ರೂಪ್ನ (Adani group) ವರದಿಯ ನಂತರ ಅಮೆರಿಕ (America) ಮೂಲದ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆ (Hindenburg) ಗುರುವಾರ ಮತ್ತೊಂದು ಹೊಸ ವರದಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ತನ್ನ ಟ್ವೀಟ್ನಲ್ಲಿ ಶೀಘ್ರದಲ್ಲೇ ಹೊಸ ವರದಿ ಬಿಡುಗಡೆ ಮಾಡುವುದಾಗಿ ಸಂಸ್ಥೆ ಪ್ರಕಟಿಸಿದೆ.
ಜನವರಿಯಲ್ಲಿ ಹಿಂಡೆನ್ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು (shell companies) ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.
ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಈ ಬಗ್ಗೆ ಅದಾನಿ ಸಮೂಹ ಸಂಸ್ಥೆಗಳು ವರದಿಯ ಅಂಶಗಳನ್ನು ದುರುದ್ದೇಶಪೂರಿತ ಮತ್ತು ಆಧಾರರಹಿತ ಎಂದಿತ್ತು. ಅಲ್ಲದೇ ಭಾರತದ (India) ಮೇಲಿನ ದಾಳಿ ಇದಾಗಿದೆ ಎಂದು ತಿರುಗೇಟು ನೀಡಿತ್ತು