ಕೆಲ ಕಾಲ ಸಿನಿಮಾ ರಂಗದಿಂದ ದೂರವಾಗಿದ್ದ ಬಾಲಿವುಡ್ ನಟ ಜಾನ್ ಅಬ್ರಾಹಂ ವೇದಾ ಸಿನಿಮಾದ ಮೂಲಕ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಜಾತಿ ತಾರತಮ್ಯದ ಮೇಲೆ ಚಿತ್ರ ಹೆಣೆಯಲಾಗಿದೆ. ಇತ್ತೀಚೆಗೆ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಜಾನ್ ಅಬ್ರಾಹಂ ಅವರು ಪತ್ರಕರ್ತನೊಬ್ಬನ ಮೇಲೆ ಗರಂ ಆಗಿದ್ದರು. ಕಿರಿಕಿರಿ ಆಗುವಂತಹ ಪ್ರಶ್ನೆ ಕೇಳಿದ್ದಕ್ಕೆ ಜಾನ್ ಅಬ್ರಹಾಂ ಅವರಿಗೆ ಕೋಪ ಬಂದಿತ್ತು. ಇದೀಗ ಘಟನೆ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದು, ಟ್ರೇಲರ್ ಲಾಂಚ್ನಲ್ಲಿ ಯಾವ ರೀತಿಯ ಹುನ್ನಾರ ನಡೆದಿರಬಹುದು ಎಂದು ಹೇಳಿದ್ದಾರೆ.
‘ವೇದಾ’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಸಿಕ್ಕಾಪಟ್ಟೆ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಸಿನಿಮಾಗಳಲ್ಲೂ ಆ್ಯಕ್ಷನ್ ಅಬ್ಬರ ಇತ್ತು. ಅದನ್ನು ಅಣಕಿಸುವ ರೀತಿಯಲ್ಲಿ ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದ್ದ. ‘ಮಾಡಿದ್ದನ್ನೇ ಎಷ್ಟು ದಿನ ಮಾಡುತ್ತೀರಿ? ಹೊಸದಾಗಿ ಏನಾದರೂ ಮಾಡಿ’ ಎಂದು ಆತ ಕೇಳಿದ. ಇದರಿಂದ ಜಾನ್ ಅಬ್ರಾಹಂ ಅವರಿಗೆ ಕೋಪ ಬಂತು. ಪ್ರಶ್ನೆ ಕೇಳಿದ ವ್ಯಕ್ತಿಗೆ ಈಡಿಯಡ್ ಎಂದು ಜಾನ್ ಅಬ್ರಾಹಂ ಎಲ್ಲರೆದುರು ಬೈದಿದ್ದರು.
ಜಾನ್ ಅಬ್ರಾಹಂ ಅವರ ಅನಿಸಿಕೆ ಪ್ರಕಾರ, ತಮ್ಮನ್ನು ಕೆಣಕಬೇಕು ಎಂಬ ಉದ್ದೇಶದಿಂದಲೇ ಆ ಪತ್ರಕರ್ತನನ್ನು ಯಾರೋ ಅಲ್ಲಿಗೆ ಕಳಿಸಿದ್ದರು. ‘ನನ್ನನ್ನು ಕೆಟ್ಟವನನ್ನಾಗಿ ಬಿಂಬಿಸಬೇಕು ಎಂಬುದು ಅವರ ಉದ್ದೇಶ ಇರಬಹುದು. ನಾನು ಕೋಪ ಮಾಡಿಕೊಂಡು ಪ್ರತಿಕ್ರಿಯಿಸಿದೆ. ಅವರ ಉದ್ದೇಶ ಈಡೇರಿತು’ ಎಂದು ಜಾನ್ ಅಬ್ರಾಹಂ ಅವರು ಹೇಳಿದ್ದಾರೆ. ಇಂದಿಗೂ ಟ್ರೇಲರ್ ಲಾಂಚ್ ಇವೆಂಟ್ಗಳನ್ನು ಮಾಡುತ್ತಿರುವುದು ಅಪ್ರಸ್ತುತ ಎಂದು ಕೂಡ ಅವರು ಹೇಳಿದ್ದಾರೆ.
‘ವೇದಾ’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಜೊತೆ ಶಾರ್ವರಿ ವಾಘ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸೈನಿಕನಾಗಿ ಜಾನ್ ಅಬ್ರಾಹಂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ವೇದಾ ಸಿನಿಮಾದ ಜೊತೆಗೆ ಥಿಯೇಟರ್ ನಲ್ಲಿ ಕಂಗನಾ ನಿರ್ದೇಶಿಸಿ, ನಟಿಸಿರುವ ಎಮರ್ಜೆನ್ಸಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ.