ಹುಬ್ಬಳ್ಳಿ :ಅವನ ಎಲ್ಲಾ ತಾಕತ್ತು ನಾನು ನೋಡಿದ್ದಿನಿ ಎಂದು ಕರ್ನಾಟಕ ರಾಜ್ಯ ಒಳಚರಂಡಿ ಅಧ್ಯಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ಬಯ್ಯಾ ಪ್ರಸಾದ್ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೇಲೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರ ಅವರು ಮಾತನಾಡಿದರು,ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿನ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಹಿನ್ನಲೆಯಲ್ಲಿ ಹಿಂದೂ ಸ್ಮಶಾನದಲ್ಲಿ ಕ್ಯಾಂಟೀನ್ ಕಟ್ಟೋದಲ್ಲಾ ಅಬ್ಬಯ್ಯಗೆ ತಾಕತ್ತು ಇದ್ದ್ರೆ ಕಬರಸ್ತಾನದಲ್ಲಿ ಕ್ಯಾಂಟೀನ್ ಕಟ್ಟಲಿ ಅಂತ ಸವಾಲು ಹಾಕಿದ್ದರು ಪ್ರಮೋದ್ ಮುತಾಲಿಕ್
ಈ ಕುರಿತು ಪ್ರತಿಕ್ರಿಯೆ ನೀಡುವಾಗ ಮುತಾಲಿಕ್ ಮೇಲೆ ವಾಗ್ದಾಳಿ ನಡೆಸಿದ ಅಬ್ಬಯ್ಯ ಅವರುಅವನಿಗೆ ಬೆಂಕಿ ಹಚ್ಚೊದು ಬಿಟ್ಟಿರೆ ಬೇರೆನು ಗೊತ್ತಿಲ್ಲ ಪ್ರಮೋದ್ ಮುತಾಲಿಕ್ ನನಗೆ ಲೀಸ್ಟ್ ಬಾದರ್.. ಅವನ್ನಾ ನಾನು ಕೇರ್ ಮಾಡಲ್ಲಾ ಅವನ್ನಾ ನಾನು ತಲೆಗೆ ತೆಗೆದುಕೊಳ್ಳೊದಿಲ್ಲ. ಪ್ರಮೋದ್ ಮುತಾಲಿಕ್ ದೊಡ್ಡಇಂಟರ್ ನ್ಯಾಷನಲ್ ಲೀಡರ್ ಅಲ್ಲಾಅವನು ಹೇಳಿದ ತಕ್ಷಣ ನಾನು ತಾಕತ್ತು ತೋರಿಸೋದು ಬೇಕಿಲ್ಲಾನನಗೆ ನನ್ನ ಜನ ಬೇಕು.. ನನ್ನ ಲೀಡರ್ ಬೇಕುನನ್ನನ್ನು ಜನ ಹಾರಿಸಿದ್ದಾರೆ ಮುತಾಲಿಕ್ ಅಲ್ಲ ಎಂದ ಅವರು
ಬಡವರ ಅನುಕೂಲಕ್ಕಾಗಿ ಸ್ಮಶಾನದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ. ಒಂದು ವೇಳೆ ಅಲ್ಲಿನ ಜನರು ಬೇಡಾ ಅಂದರೆ ಕ್ಯಾಂಟೀನ್ ಸ್ಥಳಾಂತರ ಮಾಡಲಾಗುತ್ತದೆ. ಕೆಲವು ಜನ ಕ್ಯಾಂಟೀನ್ ಬೇಕು ಎನ್ನುತ್ತಿದ್ದಾರೆ ಇನ್ನೂ ಕೆಲವು ಜನ ಬೇಕು ಎನ್ನುತ್ತಿದ್ದಾರೆ. ಹೀಗಾಯ ಜನರಿಂದ ಮೊದಲಿಗೆ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆಹೆಚ್ಚಿನ ಜನ ಬೇಡಾ ಅಂದರೆ ಕೂಡಲೇ ಕ್ಯಾಂಟೀನ್ ಸ್ಥಳಾಂತರ ಮಾಡಲಾಗುತ್ತದೆ. ಆದರೆ ಕ್ಯಾಂಟೀನ್ ವಿಚಾರದಲ್ಲಿ ಕೆಲವರು ಸ್ಥಳೀಯ ರಾಜಕೀಯ ಮಾಡುತ್ತಿದ್ದಾರೆ.ಇದನ್ನು ನಾನು ಸಹಿಸುವುದಿಲ್ಲ.. ಅಲ್ಲಿನ ಜನ ಬೇಡಾ ಅಂದರೆ ಕಂಡಿತವಾಗಿ ಕ್ಯಾಂಟೀನ್ ಸ್ಥಳಾಂತರ ಮಾಡುತ್ತೆವೆ ಎಂದರು