ಬೆಂಗಳೂರು: ತೆರೆಯಲ್ಲಿ ಕುಳಿತಿರೊ ಕಿರಾತಕರು ಅಟ್ಟಹಾಸ ಮೆರಿತಿದ್ದಾರೆ.ಪೊಲೀಸರ ಜೊತೆಗೆ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾರೆ.ಸಾರ್ವಜನಿಕರಲ್ಲಿ ಭಯ ಹುಟ್ಟಿಸ್ತಿದ್ದಾರೆ..ಸಿಲಿಕಾನ್ ಸಿಟಿಯಲ್ಲಿ ಮತ್ತದೆ ಹುಸಿಬಾಂಬ್ ಇ-ಮೇಲ್ ಸದ್ದು ಮಾಡ್ತಿದೆ.ಹಾಗಾದ್ರೆ ಈ ಬಾರಿ ಬಾಂಬ್ ಬೆದರಿಕೆ ಬಂದಿದ್ದು ಎಲ್ಲಿಗೆ ಅದನ್ನೇ ತೋರಿಸ್ತೀವಿ ನೋಡಿ..
ಇದು ಕಸ್ತೂರಬಾ ರಸ್ತೆಯಲ್ಲಿರೊ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ..ಬೆಂಗಳೂರಿನ ಪ್ರಮುಖ ಪ್ರವಾಸಿ ಸ್ಥಳ ಹಾಗೂ ಅತ್ಯುನ್ನತ ವಸ್ತು ಸಂಗ್ರಹಾಲಯದಲ್ಲಿ ಇದು ಒಂದು.ಇದು ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಎಂಜಿನ್ಗಬಳನ್ನು ಒಳಗೊಂಡಿದೆ.ಪ್ರತಿ ದಿನ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಈ ಪ್ರಯೋಗಾಲಯಕ್ಕೆ ಭೇಟಿ ನೀಡ್ತಾರೆ.ಆದ್ರೆ ಇದೇ ಪ್ರಯೋಗಾಲಯದಲ್ಲಿ ಇವತ್ತು ಆತಂಕದ ವಾತಾವರಣ ಸೃಷ್ಟಿಯಾಗಿಬಿಟ್ಟಿತ್ತು.ಅಧಿಕಾರಿಗಳೇ ಒಂದು ಕ್ಷಣ ನಡುಗಿ ಹೋಗಿದ್ರು..ಹೌದು..ಎಂದಿನಂತೆ ಇವತ್ತು ಬೆಳಗ್ಗೆ 9 ಗಂಟೆಗೆ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಗೇಟ್ ಓಪನ್ ಮಾಡಿದ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದ್ದಾರೆ.ಅದ್ರಲ್ಲಿನ ಒಂದು ಇ-ಮೇಲ್ ನೋಡ್ತಿದ್ದಂತೆ ಬೆವತು ಹೋಗಿದ್ರು..Morgue999lol ಎಂಬ ಇ-ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂ ಗೆ ಬಾಂಬ್ ಇಟ್ಟಿರೋದಾಗಿ ಉಲ್ಲೇಖವಾಗಿತ್ತು..ಹಾಗಾದ್ರೆ ಆ ಮೇಲ್ ನಲ್ಲಿ ಏನಿತ್ತು ಅನ್ನೋದನ್ನೇ ನೋಡೋದಾದ್ರೆ..
ಮ್ಯೂಸಿಯಂ ಒಳಗೆ ವಿವಿಧ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದೇವೆ.ಅದನ್ನು ಗೌಪ್ಯ ಬಸ್ಥಳದಲ್ಲಿ ಇರಿಸಿದ್ದು.ಬೆಳಗ್ಗೆ ಸ್ಫೋಟಗೊಳ್ಳಲಿದೆ.ಮ್ಯೂಸಿಯಂ ನಲ್ಲಿರುವ ಅಷ್ಟು ಜನ ಸಾವನ್ನಪ್ಪಲ್ಲಿದ್ದಾರೆ.
ನಾವು ಟೆರರಿಸರ್ಸ್ 111 ಎಂಬ ಸಂಘಟನೆಗೆ ಸೇರದವರು.ನಮ್ಮ ಗ್ರೂಪ್ ಹೆಸರನ್ನ ಮಾಧ್ಯಮದವರಿಗೆ ನೀಡಿ ಎಂಬ ಮೇಲ್ ನೋಡಿದ್ದೇ ತಡ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ,ಶ್ವಾನ ದಳ,ಬಾಂಬ್ ನಿಶ್ಕ್ರಿಯ ದಳ ತಂಡ ಪರಿಶೀಲನೆ ನಡೆಸಿದ್ದು,ಯಾವುದೇ ಸ್ಫೋಟಕ ವಸ್ತು ಕಂಡು ಬಂದಿರೋದಿಲ್ಲ.ನಂತರ ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಖಾತ್ರಿ ಆಗ್ತಿದ್ದಂತೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಐಪಿ ಅಡ್ರಸ್ ಹುಡುಕಾಟ ನಡೆಸ್ತಿದ್ದಾರೆ..ಶಾಲೆಗಳಿಗೆ ಬಂದ ಇ-ಮೇಲ್ ಬೆದರಿಕೆ ಪ್ರಕರಣವನ್ನು ಪೋಲಿಸರು ಇನ್ನೂ ಬೇಧಿಸಲಾಗಲಿಲ್ಲ.ಇನ್ನು ಈ ಪ್ರಕರಣ ಬೇಧಿಸೋದು ಕೂಡ ಅನುಮಾನ ಎಂತಲೇ ಹೇಳಲಾಗ್ತಿದೆ.