ಬಿಜಾಪುರ: ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ರಾಜ್ಯದ ಇತರ ಕಡೆ ನಡೆದ ಗಲಭೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸರಕಾರ ಮುಂದಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ಈ ಕುರಿತು ಶಾಸಕ ಯತ್ನಾಳ್ ಟ್ವೀಟ್ ಮಾಡಿದ್ದಾರೆ. ” ಮೈಸೂರು ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವರಿಗೆ ಪ್ರಕರಣಗಳನ್ನು ಹಿಂಪಡೆಯಲು ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿಕ್ರಮ ಕೈಗೊಳ್ಳಲು ಗೃಹ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಆರೋಪಿಗಳಲ್ಲಿ ಪೋಲೀಸರ ವಿರುದ್ಧ ಕಲ್ಲುತೂರಿರುವವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಹಾಗು ಗಲಭೆ ನಡೆಸಿದವರು ಇದ್ದಾರೆ ” ಎಂದಿದ್ದಾರೆ.
ಪಿಎಫ್ಐ ಕೇಸ್ ವಾಪಸ್ ಪಡೆದು ಅಶಾಂತಿ
ಟ್ವೀಟ್ನಲ್ಲಿ ಮುಂದುವರೆದು, ” ಹಿಂದೆ ಇವರದ್ದೇ ಸರಕಾರ ಇದ್ದಾಗ ಪಿಎಫ್ ಕಾರ್ಯಕರ್ತರ ವಿರುದ್ಧದ ಕೇಸುಗಳನ್ನು ವಾಪಸ್ ಪಡೆದು ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಪ್ರಚೋದನೆ ನೀಡಿದ್ದರು. ಯಾರದ್ದೋ ಕೃಪೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದಿದ್ದ ಗೃಹ ಸಚಿವರು ಈಗ ಮುಸ್ಲಿಮರನ್ನು ಓಲೈಸಲು ಈ ಹುಚ್ಚು ಕೆಲಸಕ್ಕೆ ಕೈಹಾಕಿದ್ದಾರೆ, ” ಎಂದು ಯತ್ನಾಳ್ ಟೀಕಿಸಿದ್ದಾರೆ.
ಇದನ್ನೂ ಓದಿ : ಉಡುಪಿ ಪ್ರಕರಣ: ಪೊಲಿಸರು ಒತ್ತಡಕ್ಕೆ ಮಣಿಯಬಾರದು: ಬಸವರಾಜ ಬೊಮ್ಮಾಯಿ