ಸಾಮಾನ್ಯವಾಗಿ ಕಿವಿಗೆ ನೋವು ಬರುವುದು ಕುಗ್ಗೆ ಕಟ್ಟಿದಾಗ, ಕಿವಿಯ ಸೋಂಕು, ವಸಡಿನ ಸಮಸ್ಯೆ ಇದ್ದಾಗ, ಸೈನಸ್ ಇದ್ದಾಗಲೂ ಕಿವಿ ನೋವು ಬರುತ್ತದೆ. ಅಂತಹ ಸಂದರ್ಭದಲ್ಲಿ ತಕ್ಷಣ ಆರೈಕೆ ಮಾಡಿಕೊಳ್ಳಬೇಕು. 2, 3 ದಿನವಾದರೂ ಗುಣವಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗಾದರೆ ಕಿವಿ ನೋವು ಆರಂಭವಾದರೆ ಯಾವೆಲ್ಲಾ ಮನೆಮದ್ದು ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಈರುಳ್ಳಿ ರಸ: ಚಳಿಗಾಲದಲ್ಲಿ ಶೀತ ದಿಂದ ಉಂಟಾಗುವ ಕಿವಿ ನೋವಿನ ಸಮಸ್ಯೆ ಶಮನ ಮಾಡಲು ಈರುಳ್ಳಿ ರಸ ಮನೆ ಮದ್ದಾಗಿದೆ. ಚಳಿಗಾಲದಲ್ಲಿ ಕಿವಿ ನೋವು ಕಾಣಿಸಿಕೊಂಡ ವೇಳೆ ಎರಡರಿಂದ ಮೂರು ಹನಿ ಈರುಳ್ಳಿ ರಸವನ್ನು ಕಿವಿಗೆ ಹಾಕಿಕೊಳ್ಳುವುದರಿಂದ ಕಿವಿ ನೋವು ಉಪಶಮನವಾಗಲಿದೆ.
ಸಾಸಿವೆ ಎಣ್ಣೆ: ಕಿವಿನೋವು ಉಂಟಾದ ವೇಳೆ ತಕ್ಷಣಕ್ಕೆ ಮನೆಮದ್ದು ಅಂದರೆ ಅದು ಸಾಸಿವೆಯೆಣ್ಣೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಅದರ ಕೆಲವು ಹನಿಗಳನ್ನು ಯಾವ ಕಿವಿ ನೋವಾಗಿದ್ಯೋ ಆ ಕಿವಿಗೆ ಹಾಕಿದರೆ ತಕ್ಷಣಕ್ಕೆ ನೋವುಶಮನ ವಾಗಲಿದೆ.. ಆದರೆ ಕಿವಿನೋವು ಹೆಚ್ಚಾದರೆ ವೈದ್ಯರನ್ನು ಕೂಡಲೆ ಸಂಪರ್ಕ ಮಾಡುವುದು ಸೂಕ್ತ.
ಬೆಳ್ಳುಳ್ಳಿ ಎಣ್ಣೆ: ಚಳಿಗಾಲದಲ್ಲಿ ಶೀತ ದಿಂದ ಉಂಟಾಗುವ ಕಿವಿ ನೋವಿಗೆ ಬೆಳ್ಳುಳ್ಳಿ ಎಣ್ಣೆಯಿಂದ ನಮಗೆ ಪರಿಹಾರ ಸಿಗಲಿದೆ.. ಮನೆಯಲ್ಲಿ ಸಿಗುವ ಸಾಸಿವೆ ಎಣ್ಣೆಯಲ್ಲಿ ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಬಿಸಿಮಾಡಿ ಅದನ್ನು ನೋವು ಇರುವ ಕಿವಿಗೆ ಹಾಕುವುದರಿಂದ ಕಿವಿನೋವು ತಕ್ಷಣಕ್ಕೆ ಕಡಿಮೆಯಾಗಲಿದೆ.
4)ಉಪ್ಪು: ಬಾಣಲೆಯಲ್ಲಿ ಉಪ್ಪನ್ನು ಹಾಕಿ ಬಿಸಿ ಮಾಡಿ. ಇದಾದ ನಂತರ ಬಟ್ಟೆಯಲ್ಲಿ ಹಾಕಿ ಅದನ್ನು ಕಟ್ಟಿ. ಅದರ ಬಿಸಿಯನ್ನು ಕಿವಿಗೆ ಮುಟ್ಟಿಸಿ. ಅದರಿಂದ ಹೊರಹೊಮ್ಮುವ ಶಾಖದಿಂದ ನೋವು ದೂರವಾಗುತ್ತದೆ. ಈ ರೀತಿಯಾಗಿ, ಬಿಸಿನೀರಿನ ಬಾಟಲಿಯನ್ನು ಸಹ ಬಳಸಬಹುದು.