ಮೈಸೂರು:- 2024 ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಕೆಲವೊಂದು ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಅದರಂತೆ ಮೈಸೂರು ಕೊಡಗು ಲೋಕಸಭೆ ಮಹಾಯುದ್ಧ ಈ ಬಾರಿ ಹೈ ವೋಲ್ಟೇಜ್ ಆಗೋದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ ಜಾತಿ ಸಮೀಕರಣ ಪ್ಲಾನ್ ಮಾಡ್ತಿದೆ. ಜೊತೆಗೆ ತವರು ಗೆಲ್ಲಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಣತಂತ್ರ ಮಾಡಿದ್ದಾರೆ.
ತವರು ಜಿಲ್ಲೆ ಮೈಸೂರು ಹಾಗೂ ಚಾಮರಾಜನಗರ ಚುನಾವಣಾ ಪ್ರಚಾರದ ಅಖಾಡಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಇಳಿದಿದ್ದಾರೆ. ಎರಡೂ ಕ್ಷೇತ್ರಗಳನ್ನ ಮರಳಿ ಪಡೆಯಲು ಸ್ಥಳೀಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಎರಡೂ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಬೇಕಾದ ಮಾನದಂಡಗಳ ಬಗ್ಗೆ ಚರ್ಚಿಸಿದ್ದಾರಂತೆ. ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ವಿರುದ್ಧ ಸ್ಪರ್ಧಿಸಿರುವ ಲಕ್ಷ್ಮಣ್ ಗೆಲ್ಲಿಸಿಕೊಳ್ಳಲು ಒಕ್ಕಲಿಗ ಮತಗಳನ್ನ ಸೆಳೆಯಲು ಭಾರೀ ರಣತಂತ್ರ ರೂಪಿಸಿದ್ದಾರೆ.
ಯದುವೀರ್ ಟಾರ್ಗೆಟ್ ಬೇಡ, ಬಿಜೆಪಿ ನಮ್ಮ ಟಾರ್ಗೆಟ್, ಯದುವೀರ್ ವಿರುದ್ಧ ಸಿಕ್ಕ ಸಿಕ್ಕ ರೀತಿ ಹೇಳಿಕೆ ಕೊಡಬೇಡಿ. ಬಿಜೆಪಿ ಲೀಡ್ ಆಗಿರುವ ಕ್ಷೇತ್ರಗಳಲ್ಲಿ ಹೆಚ್ಚು ಕೆಲಸ ಮಾಡಿ, ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರ ನನ್ನ ಪ್ರತಿಷ್ಠೆ ಹೀಗಾಗಿ ಗೆಲ್ಲಲೇಬೇಕು. ಚಿಕ್ಕಪುಟ್ಟ ಅಸಮಾಧಾನಗಳಿದರೆ ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿ, ಎಲ್ಲಾ ಕಡೆ ನಾನು ಬರಲು ಆಗಲ್ಲ, ನೀವೇ ನನ್ನ ಪ್ರತಿನಿಧಿಗಳಾಗಿ ಅಂತ ಟಿಪ್ಸ್ ಕೊಟ್ಟಿದ್ದಾರಂತೆ.
ಇನ್ನೂ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನ ಮೈಸೂರು ಮತ್ತು ಚಾಮರಾಜನಗರದ ಪ್ರವಾಸ ಕೈಗೊಂಡಿದ್ದಾರೆ.
ಈಗಾಗಲೇ ಮೈಸೂರು ಮತ್ತು ಚಾಮರಾಜನಗರದಲ್ಲಿಆಪರೇಷನ್ ಹಸ್ತ ಶುರು ಮಾಡಿರುವ ಸಿಎಂ, ಮೈಸೂರು ಮತ್ತು ಚಾಮರಾಜನಗರದಲ್ಲಿನ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಮತ್ತು ಮುಖಂಡರನ್ನು ಕಾಂಗ್ರೆಸ್ನತ್ತ ಕರೆ ತರುವಲ್ಲಿಯಶಸ್ವಿಯಾಗಿದ್ದಾರೆ. ಇದರೊಂದಿಗೆ ಶ್ರೀನಿವಾಸಪ್ರಸಾದ್ ಅವರ ಸೋದರಿಯ ಪುತ್ರ ಧೀರಜ್ ಪ್ರಸಾದ್ ಕೂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ
ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿರುವ ಶ್ರೀನಿವಾಸಪ್ರಸಾದ್ ಅವರ ಬೆಂಬಲ ಸಿಕ್ಕರೆ ಚಾಮರಾಜನಗರ ಕ್ಷೇತ್ರದಲ್ಲಿಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ.