ಬೆಂಗಳೂರು ಗ್ರಾಮಾಂತರ: ಭೂಗತ ಲೋಕದಲ್ಲಿ ಮುಚ್ಚು ಹಿಡಿದವನು ಮಚ್ಚಲ್ಲ ಅಂತ್ಯ ಅನ್ನೋದು ಇದೊಂದು ನಿದರ್ಶನ.. ಕಳೆದ ಏಳು ವರ್ಷಗಳ ಹಿಂದೆ ಕೊಲೆ ಮಾಡಿ ಜೈಲು ಸೇರಿದ್ದ..ಇತ್ತೀಚಿಗಷ್ಟೇ ಜೈಲಿನಿಂದ ಹೊರಗಡೆ ಬಂದಿದ್ದ ಮಧ್ಯರಾತ್ರಿ ಮೂರು ಗಂಟೆಗೆ ಸ್ನೇಹಿತರ ಬಂದಿದ್ದಾರಂತೆ ಕರೆಸಿ, ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ… ಅಷ್ಟಕ್ಕೂ ಆ ಹೆಣವಾದ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು ಅಂತೀರಾ ಈ ಸ್ಟೋರಿ ನೋಡಿ
ಹೀಗೆ ಫೋಟೋದಲ್ಲಿ ಕಾಣ್ತಿದಾನಲ್ಲ ಈತನ ಹೆಸರು ವಿಜಯ್ ಕುಮಾರ್ ಅಂತ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮರಸೂರು ಗ್ರಾಮದ ಪದ್ಮರಾಜು ಮಗ ವಿಜಯ್.. ಹೀಗೆ ಬೆಳ್ಳಂಬೆಳಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ವಿಜಯಕುಮಾರ್ ಕೊಲೆಯಾದ ಯುವಕ .ಇನ್ನೂ.ಮೃತ ಯುವಕ ವಿಜಯ 2017ರಲ್ಲಿ ಆನೇಕಲ್ ತಾಲೂಕಿನ ತಟ್ನಹಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಎಣ್ಣೆ ಪಾರ್ಟಿ ಮಾಡಲು ಹೋಗಿ ಅವಡದೇನಹಳ್ಳಿ ಗ್ರಾಮದ ಮನೋಜ್ ಅಲಿಯಾಸ್ ಬಬ್ಲು ಎಂಬಾತನನ್ನು ಚಾಕುನಿಂದ ತಿವಿದು ಕೊಲೆ ಮಾಡಿ , ಏಳು ವರ್ಷ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಶಿಕ್ಷೆ ಮುಗಿಸಿ ಇತ್ತೀಚಿಗಷ್ಟೇ ಬೆಲ್ ಮೇಲೆ ಹೊರಗಡೆ ಬಂದಿದ್ದ.. ಕೊಲೆಯಾಗಿದ್ದ ಮನೋಜ್ ತಮ್ಮ ಅರ್ಜುನ್ ಗ್ಯಾಂಗ್ ಇಂದು ಬೆಳ್ಳಂ ಬೆಳಗ್ಗೆ ಆತನ ಮನೆ ಸಮೀಪವೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ..
ಇನ್ನು ಕೊಲೆ ಮಾಡುವ ಮುಂಚೆ ಬೆಳಗಿನಜಾವ ಮೂರು ಗಂಟೆಗೆ ವಿಜಿಗೆ ಫೋನ್ಕೆರೆ ಮಾಡಿ ಸ್ನೇಹಿತರು ಬಂದಿದ್ದಾರೆ ಅಂತ ಹೇಳಿದ್ರಂತೆ ಆಟೋದಲ್ಲಿ ಬಂದಿದ್ದ ಐದು ಜನ ಮರ್ಸೂರು ರಸ್ತೆಯಲ್ಲಿ ಅಂಗಡಿಯ ಮುಂದೆ ಮರದ ಕತ್ತಲಲ್ಲಿ ನಿಂತು ಐದು ಜನ ಹಿಂಬದಿಯಲ್ಲಿ ಮಚ್ಚಿನಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ ಇನ್ನು ವಿಜಿ ಯಾರ್ ಜೊತೆಗಿದ್ದ ಎಲ್ಲೋಗ್ತಿದ್ದ ಅನ್ನೋದ್ರು ಬಗ್ಗೆ ಮಾಹಿತಿ ಕಲೆಹಾಕಿ ಹೊಂಚು ಹಾಕಿ ಕೊಲೆ ಮಾಡಿದ್ದಾರೆ ಎಂದು ತಂದೆ ಪದ್ಮರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಇನ್ನೂ ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಡ್ಡಿ, ಅಡಿಷನಲ್ ಎಸ್ ಪಿ ಪುರುಷೋತ್ತಮ್ ಬೆಳೆಚುತಜ್ಞ ಡಾಗ್ಸ್ಕೋಡ್ ಫಾರಿನ್ ಸಿಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.. ಪೊಲೀಸರು ಮೃತರ ಸಂಬಂಧಿಯ ಜೊತೆಗೆ ಮಾಹಿತಿ ಪಡೆದು ಎಲ್ಲಾ ಆಯಾಮಗಳನ್ನು ತನಿಖೆಯನ್ನು ಮುಂದುವರಿಸಿದ್ದಾರೆ ಆರೋಪಿಗಳ ಪಟ್ಟಿಗಾಗಿ ಸಹ ತಂಡಗಳನ್ನು ರಚಿಸಿದ್ದಾರೆ ಸದ್ಯ ಸೂರ್ಯನಗರ ಪೊಲೀಸ್ರು ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.. ಒಟ್ನಲ್ಲಿ ಮಚ್ಚು ಹಿಡಿದವನ ಕಥೆ ಮಚ್ಚಿನಿಂದಲೇ ಅಂತ್ಯ ಆಗಿರೋದು ಮಾತ್ರ ದುರಂತವೇ ಸರಿ..