ಮುಂಬೈ: 2001 ರಲ್ಲಿ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ದರೋಡೆಕೋರ ಛೋಟಾ ರಾಜನ್ ಅಪರಾಧಿ ಎಂದು ಮುಂಬೈ ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ ಅಡಿಯಲ್ಲಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರು ರಾಜನ್ ದೋಷಿ ಎಂದು ತೀರ್ಪು ನೀಡಿದ್ದಾರೆ.
ಜಯಾ ಶೆಟ್ಟಿ ಅವರು ಸೆಂಟ್ರಲ್ ಮುಂಬೈನ ಗಾಮ್ದೇವಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್ನ ಮಾಲೀಕರಾಗಿದ್ದರು. ಇವರಿಗೆ ಛೋಟಾ ರಾಜನ್ ಗ್ಯಾಂಗ್ನಿಂದ ಸುಲಿಗೆ ಕರೆಗಳು ಬರುತ್ತಿದ್ದವು. 2001ರ ಮೇ 4 ರಂದು ಹೋಟೆಲ್ನಲ್ಲಿ ರಾಜನ್ ಗ್ಯಾಂಗ್ನ ಇಬ್ಬರು ಸದಸ್ಯರು ಶೆಟ್ಟಿಯನ್ನು ಗುಂಡಿಕ್ಕಿ ಕೊಂದರು.
ಆರಂಭದಲ್ಲಿ ಬೆದರಿಕೆಯಿಂದಾಗಿ ಮಹಾರಾಷ್ಟ್ರ ಪೊಲೀಸರು ಹೋಟೆಲ್ ಮಾಲೀಕನಿಗೆ ಭದ್ರತೆ ಒದಗಿಸಿದ್ದರು. ಆದರೆ, ಕೊಲೆಯಾಗುವ ಎರಡು ತಿಂಗಳ ಮೊದಲು ಅವರ ಭದ್ರತೆಯನ್ನು ಹಿಂಪಡೆಯ ಲಾಗಿತ್ತು. 2015 ರ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದಲ್ಲಿ ಬಂಧಿಸಿದ ನಂತರ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಬಳಿಕ ಛೋಟಾ ರಾಜನ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದೆ.
ಇಬ್ಬರು ಶೂಟರ್ಗಳು ಜಯ ಶೆಟ್ಟಿಯನ್ನು ಗುಂಡಿಕ್ಕಿ ಕೊಂದಿದ್ದರು. ಹೋಟೆಲ್ನ ಮ್ಯಾನೇಜರ್ ಮತ್ತು ಉದ್ಯೋಗಿ ಶೂಟರ್ಗಳನ್ನು ಬೆನ್ನಟ್ಟಿ ಅವರಲ್ಲಿ ಒಬ್ಬನನ್ನು ಹಿಡಿದಿದ್ದರು. 2018 ರಲ್ಲಿ, ವೋರಾ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು. ಆದರೆ ಛೋಟಾ ರಾಜನ್ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.