ಬೆಂಗಳೂರು ;– 5 ಗುಂಟೆ ಒಳಗಿನ ಭೂಮಿಯಲ್ಲಿ ಗೃಹನಿರ್ಮಾಣಕ್ಕೆ ಮತ್ತು ನೋಂದಣಿಗೆ ಅವಕಾಶ ನೀಡುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ”5 ಗುಂಟೆ ಒಳಗಿನ ಕಂದಾಯ ಭೂಮಿಯನ್ನು ಮಾರಾಟ ಮಾಡಬಾರದು ಎಂಬ ಕಾರಣಕ್ಕೆ ನೋಂದಣಿಗೆ ನಿರ್ಬಂಧಿಸಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಈ ರೀತಿಯ ಸಣ್ಣ ಸಣ್ಣ ಪ್ರಮಾಣದ ಭೂಮಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ ಲಾಭ ಮಾಡಿಕೊಳ್ಳುತ್ತಾರೆ. ಅಲ್ಲಿ ಸೌಲಭ್ಯ ಇಲ್ಲದೇ ಇರುವಾಗ ಜನ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ. ಈ ಕಾರಣಕ್ಕಾಗಿ 2021ರಲ್ಲಿ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ” ಎಂದು ತಿಳಿಸಿದರು
ಆದರೆ, ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ಕಡಿಮೆ ಪ್ರಮಾಣದ ಭೂಮಿ ನೋಂದಣಿಯಗಲಿದೆ. ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಎಲ್ಲಿಯಾದರೂ ಈ ರೀತಿಯ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದರೆ, ಸರಿಪಡಿಸಿ ಕೋಡುತ್ತೇವೆ” ಎಂದು ಭರವಸೆ ನೀಡಿದರು.