ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಗುರುವಾರ ಸಂಜೆ ಬಿದ್ದ ಬಾರಿ ಮಳೆಗೆ ಕುಮಾರ್ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದು 50 ಸಾವಿರ ಕ್ಕೂ ಹೆಚ್ಚು ಸಾಮಾಗ್ರಿಗಳು ನಾಶವಾಗಿರುವ ಘಟನೆ ಜರುಗಿದೆ. ಹನೂರು ಪಟ್ಟಣದ ನಿವಾಸಿ ಕುಮಾರ್ ಎಂಬುವವರ ಮನೆಯ ಗೋಡೆ ಕುಸಿದು ಹತ್ತಕ್ಕೂ ಹೆಚ್ಚು ಶೀಟ್ ಗಳು ಜಖಂಗೊಂಡಿದೆ.
ಘಟನೆ ವಿವರ: ಹನೂರು ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಕುಮಾರ್ ಎಂಬುವವರ ಮನೆಯ ಗೋಡೆ ಗುರುವಾರ ಸಂಜೆ ಏಕಾಏಕಿ ಕುಸಿದು ಬಿದ್ದಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಹೊಸದಾಗಿ ಮಳಿಗೆ ಮಾಡಲು ಸಿದ್ಧತೆಕೈಗೊಳ್ಳಲಾಗಿತ್ತು ಏಕಾಏಕಿ ಗೋಡೆ ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ಶೀಟ್ ಗಳು ಪೈಪ್ ಜಖಂಗೊಂಡಿದೆ. ಇದರಿಂದ ಸುಮಾರು ಐವತ್ತು ಸಾವಿರ ಸಾಮಗ್ರಿಗಳು ನಷ್ಟವಾಗಿದೆ.
ಇನ್ನು ಹೊಸದಾಗಿ ಮಳಿಗೆ ನಿರ್ಮಾಣ ಮಾಡುತ್ತಿದ್ದ ರಾಜು ಎಂಬುವರ ಶೀಟ್ , ಪೈಪ್ ಗಳು ಜಖಂಗೊಂಡಿರುವುದರಿಂದ ಇವರದ್ದು ಸಹ 40, ನಷ್ಟವಾಗಿ ರುವುದರಿಂದ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಬಾರಿ ಮಳೆಗೆ ಗೋಡೆ ಕುಸಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕೆಂದು ಕುಮಾರ್ ಮನವಿ ಮಾಡಿದ್ದಾರೆ.