ತುಮಕೂರು;- ಹೈವೋಲ್ಟೆಜ್ ವಿದ್ಯುತ್ ಪ್ರವಹಿಸಿ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಲೆಕಡಕಲು ಗ್ರಾಮದಲ್ಲಿ ಜರುಗಿದೆ.
ನೂರಕ್ಕೂ ಹೆಚ್ಚು ಮನೆಗಳ ಟಿ.ವಿ., ಫ್ರಿಡ್ಜ್, ಮಿಕ್ಸಿ ಸುಟ್ಟು ಕರಕಲಾಗಿದೆ. ಇನ್ನೂ ವಿದ್ಯುತ್ ಶಾಕ್ ಗೆ ಕೊಟ್ಟಿಗೆಯಲಿದ್ದ ಎಮ್ಮೆಯೂ ಬಲಿಯಾಗಿದೆ. ಊರತುಂಬೆಲ್ಲಾ ದಟ್ಟ ಹೊಗೆ ಆವರಿಸಿ ಆತಂಕ ಸೃಷ್ಟಿಸಿತು.
ಇನ್ನೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತವಾಗಿದ್ದು, ಹುಲಿಯೂರುದುರ್ಗ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.