ನಿಯಮಗಳನ್ನು ಅನುಸರಿಸದ ಕಟ್ಟಡಗಳಲ್ಲಿ ವಾಸ ಮಾಡುತ್ತಿರುವ ವಿದೇಶೀಯರನ್ನು ಅದರಲ್ಲೂ ವಿಶೇಷವಾಗಿ ಅವಿವಾಹಿತರನ್ನು ಕುವೈತ್ನ ಮನೆಗಳಿಂದ ಹೊರಹಾಕುವ ಪ್ರಕ್ರಿಯೆ ಶುರುವಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಬಿನೀದ್ ಅಲ್-ಗರ್ ಪ್ರದೇಶದಲ್ಲಿ ಮೂರು ಕಟ್ಟಡಗಳು ನಿಯಮಗಳಿಗೆ ಅನುಸಾರವಾಗಿ ಇಲ್ಲ ಎಂದು ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ 46 ಭಾರತೀಯರೂ ಸೇರಿ 50 ಮಂದಿ ಇತ್ತೀಚೆಗೆ ಮೃತಪಟ್ಟಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಬೆಂಕಿ ಅವಘಡ ಸಂಭವಿಸಿದ ಕಟ್ಟಡದಲ್ಲಿ 196 ಕಾರ್ಮಿಕರು ವಾಸ ಮಾಡುತ್ತಿದ್ದರು. ಅವರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿತ್ತು. ಮತ್ತೆ ಅಂತಹ ಅನಾಹುತ ಸಂಭವಿಸಕೂಡದು ಎಂದು ಮುಂಜಾಗ್ರತಾ ಕ್ರಮವಾಗಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳಿಂದ ನೌಕರರನ್ನು ಹೊರಗೆ ಹಾಕಲಾಗುತ್ತಿದೆ. ಅನೇಕರು ನೆಲೆಯಿಲ್ಲದೆ ರಸ್ತೆ ಬದಿಯಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.