ಹಾವೇರಿ:- ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು!? ಎಂದು ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 1964 ರಿಂದ ತಮ್ಮದೇ ಹೆಸರಿನಲ್ಲಿದ್ದ ಜಮೀನನ್ನು 2015 ರಲ್ಲಿ ಕೆಲ ಸಮಾಜಘಾತುಕರು ವಕ್ಫ್ ನಿಯಮದ ಪ್ರಕಾರ ಸಂಪೂರ್ಣ ಜಮೀನು ತಮ್ಮದಾಗಿಸಿಕೊಂಡು ಬೆಳೆದು ನಿಂತಿದ್ದ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಬಡ ರೈತನ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡಿದ್ದರು.
ಇದರಿಂದ ಮಾನಸಿಕವಾಗಿ ನೊಂದಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಇದನ್ನು ಬಹಿರಂಗಪಡಿಸಿದ ಮಾಧ್ಯಮದ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಕೇಸ್ ದಾಖಲಿಸುತ್ತದೆ ಮತ್ತು ಇದರ ಕುರಿತು ಟ್ವೀಟ್ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಮೇಲೂ ಎಫ್ಐಆರ್ ದಾಖಲಾಗಿದೆ. ಈ ಘಟನೆಯ ಸಂಪೂರ್ಣ ಮಾಹಿತಿ ಪಡೆಯಲು ಇಂದು ಸಂಸದರಾದ ಗೋವಿಂದ ಕಾರಜೋಳ ಅವರೊಂದಿಗೆ ಬಡರೈತನ ಮನೆಗೆ ಭೇಟಿ ನೀಡಿ ಅವರಿಂದಲೇ ಮಾಹಿತಿ ಪಡೆದಿದ್ದಾರೆ.
ಮೃತ ಯುವಕನ ತಂದೆ ತಾಯಿ ಮತ್ತು ಮನೆಯವರಿಗೆ ಸಾಂತ್ವಾನ ಹೇಳಿ, ಈ ಘಟನೆಗೆ ನ್ಯಾಯಾಲಯದಲ್ಲಿ ಇರುವ ಅವಕಾಶವನ್ನು ಪರಿಶೀಲಿಸಿ ಆ ಮೂಲಕ ನ್ಯಾಯ ಒದಗಿಸಲು ಭಾರತೀಯ ಜನತಾ ಪಕ್ಷದ ವತಿಯಿಂದ ಜವಾಬ್ದಾರಿ ಹೊತ್ತಿದ್ದೇನೆ. ಇಲ್ಲಿ ಮತ್ತೋರ್ವ ಅಲ್ಪಸಂಖ್ಯಾತ ಬಡ ರೈತನ ಜಮೀನನ್ನು ಕೂಡ ವಕ್ಫ್ ಕಬಳಿಸಿದೆ ಎಂಬುದು ಗೊತ್ತಾಗಿದೆ.
ನಾವು ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ. ವಕ್ಫ್ ಹೆಸರಿನಲ್ಲಿ ಬಡವರ ಜಮೀನು ಕಸಿದುಕೊಳ್ಳುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ವಕ್ಫ್ ಹೆಸರಿನಲ್ಲಿ ಬಡವರಿಗೆ ಮತ್ತು ಹಿಂದೂಗಳಿಗೆ ನೋಟೀಸ್ ನೀಡದಂತೆ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಆದೇಶ ಹೊರಡಿಸುವಂತೆ ಆಗ್ರಹಿಸಿದ್ದಾರೆ.