ಗಸಗಸೆ ಬೀಜದಿಂದ ಹಲವು ಅದ್ಭುತ ಪ್ರಯೋಜನ ಪಡೆಯಬಹುದು. ಗಸಗಸೆಯಲ್ಲಿರುವ ಲಿನಿನ್ ಅಂಶವು ಕಾಮೋತ್ತೇಜಕ ಗುಣ ಹೊಂದಿದ್ದು, ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ.
ಗಸಗಸೆಯಲ್ಲಿ ಮೆಗ್ನೀಷಿಯಂ ಅಂಶ ಸಮೃದ್ಧವಾಗಿದ್ದು, ಇದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಒತ್ತಡ ನಿವಾರಣೆಯಾಗಿ ಗುಣಮಟ್ಟದ ನಿದ್ರೆ ಮಾಡಲು ಸಹಕಾರಿಯಾಗಿದೆ. ಮಲಗುವ ಮೊದಲು ಗಸಗಸೆಯ ಟೀ ಅಥವಾ ಗಸಗಸೆಯ ಪೇಸ್ಟ್ ಅನ್ನು ಹಾಲಿನೊಂದಿಗೆ ಕುಡಿಯಬೇಕು. ಇದು ಶರೀರದ ಚಯಾಪಚಯ ಕ್ರಿಯೆ ಹೆಚ್ಚಿಸಿ, ನಿದ್ರಿಸಲು ಪ್ರಚೋದಿಸುತ್ತದೆ ಮತ್ತು ನಿದ್ರಾಹೀನತೆಯಂತಹ ಅಸಹಜತೆಯನ್ನು ಗುಣಪಡಿಸುತ್ತದೆ.
ಗಸಗಸೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದ್ದು, ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಗಸಗಸೆಯು ಏಕಾಗ್ರತೆ ಹೆಚ್ಚಿಸಲು ಮತ್ತು ಚಿತ್ತಭ್ರಮೆ ಮತ್ತು ಆಲ್ಜೀಮರ್ಸ್ ರೋಗ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಗಸಗಸೆಯಲ್ಲಿ ತಾಮ್ರ, ಸತು ಮತ್ತು ಕ್ಯಾಲ್ಸಿಯಂ ಹೆಚ್ಚಾಗಿದೆ. ಇವು ಮೂಳೆಗಳ ಖನಿಜ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಮೂಳೆಗಳು ಮುರಿಯದಂತೆ ರಕ್ಷಿಸುತ್ತದೆ. ಇದರಲ್ಲಿರುವ ಮ್ಯಾಂಗನೀಸ್ ಮೂಳೆಗಳಲ್ಲಿ ಕೊಲ್ಯಾಜಿನ್ ಉತ್ಪಾದಿಸಲು ನೆರವಾಗುವ ಮೂಲಕ ಮೂಳೆಗಳು ಹಾನಿಗೊಳಗಾಗದಂತೆ ರಕ್ಷಿಸಿ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ.