ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಯಾಕೆಂದರೆ ಈ ಮಾನ್ಸೂನ್ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಜಾಗರೂಕತೆ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದು ಹೆಚ್ಚು. ಹೀಗಾಗಿ ಮಕ್ಕಳ ಆರೋಗ್ಯ ಕಾಳಜಿ ಮಾಡಬೇಕು. .
ಹೌದು, ಮಳೆಗಾಲ ಸಾಮಾನ್ಯವಾಗಿ ಜೂನ್ ತಿಂಗಳಿಂದ ತುಂತುರು ಮಳೆಯ ಆಗಮನವಾಗುತ್ತಿದೆ. ನಾವು ಸಮಯದಲ್ಲಿ ಆರೋಗ್ಯದ ಕಾಳಜಿ ಹೇಗೆ ಮಾಡಬೇಕು ಈ ಸಮಯದಲ್ಲಿ ನಮ್ಮ ಆಹಾರದಲ್ಲಿ ಯಾವೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕು ಎಂಬುವುದಕ್ಕೆ ಇಲ್ಲಿದೆ ಉತ್ತರ..
ಹಾಗಿದ್ರೆ ಏನೆಲ್ಲಾ ತಿನ್ನಬಾರದು..?
ಮಳೆಗಾಲದಲ್ಲಿ ಬೀದಿ ಬದಿಯ ಅಂಗಡಿಗಳಲ್ಲಿ ಮತ್ತು ಹೊಟೇಲ್ಗಳಲ್ಲಿ ತಿನ್ನುವುದನ್ನು ಕಡಿಮೆ ಮಾಡಿ ಏಕೆಂದರೆ, ಮಳೆಗಾಲದಲ್ಲಿ ವೈರಸ್, ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕಗಳು ನಮ್ಮನ್ನು ಮುತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ನಾವು ಈ ಕಾಲದಲ್ಲಿ ಆಹಾರ ಪದಾರ್ಥಗಳನ್ನು ಶುದ್ಧವಾಗಿ ತೊಳೆದು ತಯಾರಿ ಮಾಡಿದ ಆಹಾರದ ಸೇವನೆಯನ್ನು ಮಾಡಬೇಕು.
ಏನನ್ನು ಕಡಿಮೆ ಮಾಡಬೇಕು?
ಮಾಂಸ, ಮೊಟ್ಟೆ ಮತ್ತು ಮೀನು ಇತ್ಯಾದಿಗಳ ಜೊತೆ ಜೊತೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸೇವನೆಯನ್ನು ಕೂಡ ಆದಷ್ಟು ಕಡಿಮೆ ಮಾಡುವುದು ಉತ್ತಮ.
ನಾವು ಈ ಮೇಲಿನ ಟಿಪ್ಸ್ಗಳನ್ನು ಫಾಲೋ ಮಾಡಿದ್ರೆ ನಾವು ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಬಹುದು.
ಇದನ್ನೂ ಓದಿ : ಮಹಿಳೆಯರೇ ಎಚ್ಚರ.. ಹೊಟ್ಟೆ ನೋವನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ..!