ನಾವು ಬಳಸುವಂತಹ ಪ್ರತಿಯೊಂದು ಎಣ್ಣೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮ್ಮ ಹಿರಿಯರು ನಮಗೆ ಹೇಳಿರುತ್ತಾರೆ. ಇದನ್ನು ನೂರಾರು ವರ್ಷಗಳಿಂದಲೂ ಬಳಸಿಕೊಂಡು ಬರಲಾಗುತ್ತಾ ಇದೆ. ಎಣ್ಣೆಯನ್ನು ಕೇವಲ ನಮ್ಮ ಆಹಾರ ಕ್ರಮದಲ್ಲಿ ಮಾತ್ರವಲ್ಲದೆ, ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತಿದೆ.
ಅದರಲ್ಲೂ ಮುಖ್ಯವಾಗಿ ಸಾಸಿವೆ ಎಣ್ಣೆಯು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸಾಸಿವೆ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಅದು ಚರ್ಮಕ್ಕೆ ಕಾಂತಿ ಹಾಗೂ ಆರೋಗ್ಯ ನೀಡುವುದು
ಸಾಸಿವೆ ಎಣ್ಣೆಯಲ್ಲಿ ಮುಖ್ಯವಾಗಿ ವಿಟಮಿನ್ ಬಿ ಸಂಕೀರ್ಣ, ವಿಟಮಿನ್ ಎ, ವಿಟಮಿನ್ ಇ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಇವೆ. ಇದನ್ನು ಹಲವಾರು ರೀತಿಯ ಚರ್ಮದ ಸೋಂಕಿಗೆ ಬಳಸಿಕೊಳ್ಳಬಹುದು. ಚರ್ಮವನ್ನು ಬಿಳಿಯಾಗಿರುವಂತಹ ಕೆಲವೊಂದು ಫೇಸ್ ಮಾಸ್ಕ್ ನ್ನು ಬಳಸಿಕೊಳ್ಳಿ ಮತ್ತು ಮುಖದ ಮೇಲೆ ಇರುವ ಕಪ್ಪು ಕಲೆ ಮತ್ತು ವರ್ಣಗುಂದಿರುವುದನ್ನು ಕಡಿಮೆ ಮಾಡಿ. ತುಟಿಯು ಒಡೆದಿದ್ದರೆ ಇದು ಅದ್ಭುತವಾಗಿ ಕೆಲಸ ಮಾಡುವುದು. ನಿಸ್ತೇಜ ಹಾಗೂ ಒಣ ಚರ್ಮವಿದ್ದರೆ ನೀವು ಇನ್ನು ತಡ ಮಾಡಲೇಬಾರದು.
ಚರ್ಮದ ಬಣ್ಣ ವೃದ್ಧಿಸಲು ಸಾಸಿವೆ ಎಣ್ಣೆ
ಕಾಂತಿಯುತ ಚರ್ಮವನ್ನು ಪಡೆಯುವುದು ತುಂಬಾ ಕಷ್ಟವೆಂದು ನಿಮಗೆ ಅನಿಸುತ್ತಿದೆಯಾ? ಹಾಗಾದರೆ ನೀವು ಇಲ್ಲಿ ಪರಿಹಾರ ಕಂಡುಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು
ಒಂದು ಚಮಚ ತೆಂಗಿನ ಎಣ್ಣೆ
ಒಂದು ಚಮಚ ಸಾಸಿವೆ ಎಣ್ಣೆ
ಬಳಸುವ ವಿಧಾನ
- ಎರಡು ಎಣ್ಣೆ ಮಿಶ್ರಣ ಮಾಡಿಕೊಂಡು ರಾತ್ರಿ ಮಲಗುವ ಮೊದಲು ಸರಿಯಾಗಿ 15 ನಿಮಿಷ ಇದರಿಂದ ಮಸಾಜ್ ಮಾಡಿ ಮತ್ತು ಇದರ ಬಳಿಕ ಮುಖವನ್ನು ಲಘು ಫೇಸ್ ವಾಶ್ ಬಳಸಿ ತೊಳೆಯಿರಿ.
- ಕೆಲವು ದಿನಗಳಲ್ಲಿ ಮುಖದಲ್ಲಿ ಕಾಂತಿ ಬರುವುದು ಮಾತ್ರವಲ್ಲದೆ, ತುಂಬಾ ನಯವಾಗಿರುವುದು.
ಬಿಸಿಲಿನ ಬಗ್ಗೆ ಚಿಂತೆ ಮಾಡಬೇಡಿ
ಬಿಸಿಲಿಗೆ ಒರಗೆ ಹೋಗಬೇಕಿದ್ದರೆ ಆಗ ಮುಖದ ಮೇಲೆ ಕಲೆಗಳು ಮೂಡುವುದು ಸಹಜ. ಇಂತಹ ಸಮಯದಲ್ಲಿ ನೀವು ಸಾಸಿವೆ ಎಣ್ಣೆಯ ಫೇಸ್ ಪ್ಯಾಕ್ ಬಳಸಬಹುದು.