ವಿಜಯನಗರ ಜಿಲ್ಲೆ : ಮಾಜಿ ಶಾಸಕ ಹೆಚ್ ಆರ್ ಗವಿಯಪ್ಪ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೊಸಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಸೋಮವಾರ ನಗರದ ಸಂಡೂರು ರಸ್ತೆಯಲ್ಲಿರುವ ಅಸಿಸ್ಟೆಂಟ್ ಕಮಿಷನರ್ ಕಾರ್ಯಲಯದಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ನಗರದ ಗಾಂಧಿಸರ್ಕನ್ನಲ್ಲಿರುವ ಗಾಂಧಿ ಪುತ್ತಳಿಗೆ ಹೂಮಾಳೆ ಸಮರ್ಪಿಸಿದರು.ನಂತರ ನಗರದ ವಿವಿಧ ರಸ್ತೆಯಲ್ಲಿ ಕಾರ್ಯಕರ್ತಳೊಂದಿಗೆ ಬೃಹತ್ ಮೆರವಣಿಯನ್ನು ನೆರವೇರಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಗವಿಯಪ್ಪ ತನ್ನ ಪತ್ನಿಯೊಂದಿಗೆ ಬಂದು ನಾಮಪತ್ರ ವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತ ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.ಹೊಸಪೇಟೆ ವಿಜಯನಗರ ಕ್ಷೇತ್ರದಲ್ಲಿ ಈ ಭಾರಿ ಜನರು ಕಾಂಗ್ರೆಸ್ಗೆ ಬೆಂಬಲ ನೀಡುತ್ತಾರೆ ಎಂದರು.ಈ ಸಂದರ್ಭದಲ್ಲಿ ಸಿರಾಜ್ ಶೇಕ್, ರಾಜಶೇಖರ್ ಹಿಟ್ನಾಳ್, ಹೆಚ್ ಎನ್ ಎಫ್ ಇಮಾಮ್ ಮುಂತಾದವರು ಪಾಲ್ಗೊಂಡರು.