ಮೊದಲ ಭಾರಿಗೆ ರಿಸ್ ಆಗಿ ಫ್ಲಾಪ್ ಆಗಿದ್ದ, ಮರು ಬಿಡುಗಡೆಯಲ್ಲಿ ಹಿಟ್ ಆದ ಸಿನಿಮಾಗಳು ಹಲವಿವೆ. ಇದೀಗ ಬಾಲಿವಡ್ ನಲ್ಲಿ ಒಂಬತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದ್ದ ಸಿನಿಮಾವೊಂದು ಜಪಾನ್ನಲ್ಲಿ ಮರು ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಹೃತಿಕ್ ರೋಷನ್ ನಟಿಸಿ, ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದ ಒಂಬತ್ತು ವರ್ಷ ಹಳೆಯ ಸಿನಿಮಾ ಬ್ಯಾಂಗ್ ಬ್ಯಾಂಗ್ ಇದೀಗ ಜಪಾನ್ನಲ್ಲಿ ಮರು ಬಿಡುಗಡೆ ಆಗಿದೆ. ಈ ಚಿತ್ರ ನೋಡೋಕೆ ಜಪಾನ್ ನಲ್ಲಿ ಜನ ಮುಗಿಬಿದ್ದು ಚಿತ್ರಮಂದಿರದತ್ತ ಓಡ್ತಿದ್ದಾರೆ. ಸಿನಿಮಾದ ಹಾಡು, ಡ್ಯಾನ್ಸ್ ಫೈಟ್ಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಹೃತಿಕ್ ಹಾಗೂ ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿದ್ದ ಬ್ಯಾಂಗ್ ಬ್ಯಾಂಗ್ ಸಿನಿಮಾ 2014 ರ ಗಾಂಧಿ ಜಯಂತಿಯಂತು ಬಿಡುಗಡೆ ಆಗಿತ್ತು. ಸುಮಾರು 150 ಕೋಟಿ ಬಜೆಟ್ನ ಈ ಸಿನಿಮಾ ಆಗ ವಿಶ್ವದಾದ್ಯಂತ 330 ಕೋಟಿ ಗಳಿಸಿತ್ತು. ಹಾಕಿದ್ದ ಬಜೆಟ್ಗೆ ದುಪ್ಪಟ್ಟು ಲಾಭ ಗಳಿಸಿಕೊಂಡಿತ್ತು. ಇದೀಗ ಈ ಸಿನಿಮಾವು ಜಪಾನ್ನಲ್ಲಿ ಬಿಡುಗಡೆ ಆಗಿದ್ದು ಅಲ್ಲಿನ ಪ್ರೇಕ್ಷಕರಿಗೆ ಸಿನಿಮಾ ಬಹುವಾಗಿ ಇಷ್ಟವಾಗಿದೆ. ಜಪಾನ್ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳು ತುಂಬಿದ್ದು, ಪ್ರೇಕ್ಷಕರು ಹೃತಿಕ್ ರೋಷನ್ ರ ಮಾಸ್ಕ್ಗಳನ್ನು ಧರಿಸಿ ಚಿತ್ರಮಂದಿರಕ್ಕೆ ಧಾವಿಸಿ ತಮ್ಮ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಹೃತಿಕ್ ಚಿತ್ರವುಳ್ಳ ಮುಖವಾಡಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಜಪಾನ್ನಲ್ಲಿ ಭಾರತೀಯ ಸಿನಿಮಾಕ್ಕೆ ಉತ್ತಮ ಮಾರುಕಟ್ಟೆ ಇದೆ. ಆರಂಭದಿಂದಲೂ ಭಾರತದ ಸಿನಿಮಾಗಳು ಇಲ್ಲಿ ಉತ್ತಮ ಪ್ರದರ್ಶನ ಕಾಣುತ್ತಾ ಬಂದಿವೆ. ಆವಾರ, ಮೇರಾ ನಾಮ್ ಜೋಕರ್ ಸಿನಿಮಾಗಳು ಸಹ ಇಲ್ಲಿ ದೊಡ್ಡ ಹಿಟ್ ಆಗಿದ್ದವು. ಸುದೀಪ್ ನಟನೆಯ ಈಗ ಸೂಪರ್ ಹಿಟ್ ಆಗಿತ್ತು. ರಜನೀಕಾಂತ್ರ ಮುತ್ತು ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇತ್ತೀಚೆಗೆ ಆರ್ಆರ್ಆರ್ ಸಿನಿಮಾ ಸಹ ಜಪಾನ್ನಲ್ಲಿ ರಿಲೀಸ್ ಆಗಿ ಉತ್ತಮ ಕಲೆಕ್ಷನ್ ಪಡೆದುಕೊಂಡಿದೆ.