ಇ ಸಿಗರೇಟ್ ಸೇದೋದು ಬಹಳ .. ಹೀಗಾಗಿ 2009ರಲ್ಲೇ ಇ ಸಿಗರೇಟ್ ಅನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು.. ಆದ್ರೆ ಇನ್ನೂ ಇ ಸಿಗರೇಟ್ ಮಾರ್ಕೆಟ್ ಬಂದಾಗಿಲ್ಲ.. ಈ ಬಗ್ಗೆ ವಿಶೇಷ ಕಾರ್ಯಚರಣೆ ಮಾಡ್ತಿರೋ ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಇ.ಸಿಗರೇಟ್ ಗೋಡೌನ್ ಮೇಲೆ ದಾಳಿ ನಡೆಸಿ ಬೃಹತ್ ಕಾರ್ಯಾಚರಣೆ ಮಾಡಿದೆ.. ಹೌದು.. ಸಿಗರೇಟ್ ಸೇದೋದು ಡೇಂಜರ್.. ಇ ಸಿಗರೇಟ್ ಇನ್ನೂ ಡೇಂಜರ್.. ಐ ಫೈ ಲೈಫ್, ಪಾರ್ಟಿ ಗೀರ್ಟಿ ಅಂತಾ ಸುತ್ತಾಡೋ ಯುವಕರಿಗೆ ಇ ಸಿಗರೇಟ್ ಹುಚ್ಚು ಹೆಚ್ಚು..
ಇ ಸಿಗರೇಟ್ ಸೇದಿದ್ರೆ ಅಷ್ಟು ಎಫೆಕ್ಟ್ ಇಲ್ಲ ಅನ್ನೋದು ಸೇದೋರ ವಾದ.. ಆದ್ರೆ ಇದ್ರಿಂದ ಬೇಗ ಕ್ಯಾನ್ಸರ್ ಅಟ್ಯಾಕ್ ಆಗುತ್ತೆ ಹೈಲಿ ಡೇಂಜರ್ ಅನ್ನೋದು ಮೆಡಿಕಲ್ ವರದಿ.. ಮೆಡಿಕಲ್ ವರದಿ ಹಿನ್ನೆಲೆ ಕೇಂದ್ರ ಸರ್ಕಾರ 2009ರಲ್ಲೇ ಇ ಸಿಗರೇಟ್ ಬ್ಯಾನ್ ಮಾಡಿತ್ತು.. ಬ್ಯಾನ್ ಮಾಡಿ ಹತ್ತಾರು ವರ್ಷಗಳಾದ್ರೂ ಇನ್ನೂ ಇ ಸಿಗರೇಟ್ ದಂಧೆ ನಿಂತಿಲ್ಲ.. ಇ ಸಿಗರೇಟ್ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಿರೋ ಬೆಂಗಳೂರು ಸಿಟಿ ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಇ ಸಿಗರೇಟ್ ಗೋಡೌನ್ ಮೇಲೆ ದಾಳಿ ನಡೆಸಿ 1ಕೋಟಿ 25ಲಕ್ಷ ಮೌಲ್ಯದ ಇ ಸಿಗರೇಟ್ ವಶಪಡೆದಿದೆ..
ಹಲಸೂರ್ ಗೇಟ್ ಠಾಣಾ ವ್ಯಾಪ್ತಿಯಲ್ಲಿ ಗೋಡೌನ್ ವೊಂದರಲ್ಲಿ ಇ ಸಿಗರೇಟ್, ಇ ಸಿಗರೇಟ್ ಲಿಕ್ವಿಡ್ ಗಳು, ಬ್ಯಾಟರಿ ಸೇರಿದಂತೆ ಇ ಸಿಗರೇಟ್ ಗೆ ಸಂಬಂಧಿಸಿದ ಹಲವು ವಸ್ತುಗಳು ಸಂಗ್ರಹ ಆಗಿರೋದ್ರ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತ್ತು.. ಇನ್ಫಾರ್ಮೇಶನ್ ಆಧರಿಸಿ ದಾಳಿ ನಡೆಸಿದ್ದ ಸಿಸಿಬಿ ಮಹಿಳಾ ಸಂರಕ್ಷಣಾ ವಿಭಾಗ ಶಾಕ್ ಆಗಿತ್ತು.. ಕೋಟಿಗೂ ಅಧಿಕ ಮೌಲ್ಯದ ಇ ಸಿಗರೇಟ್ ಗಳು, ಲಿಕ್ವಿಡ್, ಬ್ಯಾಟರಿಗಳು ಶೇಕರಣೆಯಾಗಿದ್ದು ಕಂಡು ಶಾಕ್ ಆಗಿದ್ರು.. ದಾಳಿ ನಡೆಸಿದ್ದೇ ತಡ ಈ ದಂಧೆಯ ಮುಖ್ಯ ಆರೋಪಿ ಸಿದ್ದಲಿಂಗನನ್ನ ಮತ್ತು ಸಚಿನ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ..
ತನಿಖೆ ವೇಳೆ ಸಿದ್ದಲಿಂಗ ಇವೆಂಟ್ ಆರ್ಗನೈಸರ್ ಆಗಿದ್ದು ಇವೆಂಟ್, ಪಾರ್ಟಿಗಳ ಮೂಲಕ ಅಂತರಾಜ್ಯ ಮಟ್ಟದಲ್ಲಿ ಇ ಸಿಗರೇಟ್ ಸರಬರಾಜು ಮಾಡ್ತಿದ್ದ ಅನ್ನೋದು ಗೊತ್ತಾಗಿದೆ.. ವಿದೇಶದಿಂದ ವಸ್ತುಗಳನ್ನ ಪಡೆದು ಡೈರೆಕ್ಟಾಗಿ, ಆನ್ಲೈನ್ ಮೂಲಕ ಆರ್ಡರ್ ಪಡೆದು ಮತ್ತು ಕೊರಿಯರ್ ಮೂಲಕ ಮಾರಾಟ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ.. ಸದ್ಯ ಸಿಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ 1 ಕೋಟಿ 25ಲಕ್ಷ ಮೌಲ್ಯದ ಇ ಸಿಗರೇಟ್ ಮತ್ತು ತಯಾರಿಕಾ ವಸ್ತುಗಳುನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ..