ಹುಬ್ಬಳ್ಳಿ:ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೊರರು ಭಾರತಕ್ಕೆ ಬಂದಿದ್ದರ
ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ, ಎಲ್ಲಲ್ಲಿ ಬಾಂಬ್ ಬ್ಲಾಸ್ಟ್ಗಳಾಗಿ ಎಂಬುದನ್ನು ತಿಳಿದು ಮಾತನಾಡಿಲಿ ಮೊದಲು.
ಗೃಹ ಮಂತ್ರಿ ಜಿ.ಪರಮೇಶ್ವರ್ ಬೇಜವಬ್ದಾರಿಯಿಂದ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದರು
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ ಎಂಬ ಪರಮೇಶ್ವರ್ ಹೇಳಿಕೆಗೆ ಅವರು ಕಿಡಿ ಕಾರಿದರು.ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಗೃಹ ಮಂತ್ರಿಯಾಗಿ ಜೆ.ಪರಮೇಶ್ವರ ಕೆಲಸ ಮಾಡಿದ್ದಾರೆ. ನುಸುಳುಕೊರರು ಭಾರತಕ್ಕೆ ನುಗ್ಗುವದನ್ನ ಕಡಿವಾಣ ಹಾಕಿದ್ದೆ ಬಿಜೆಪಿ ಸರಕಾರ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದ್ರಾಬಾದ್, ಮುಂಬೈ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಬಾಂಬ್ ಬ್ಲಾಸ್ಟ್ಗಳಾಗಿವೆ.
ಅದನ್ನೇಲ್ಲವನ್ನೂ ನೆನಪು ಮಾಡಿಕೊಳ್ಳಿ, ಬಾಂಬ್ ಬ್ಲಾಸ್ಟ್ ಆಗಲಿಕ್ಕೆ ಕಾರಣ ನುಸುಳುಕೊರರು ಕಾರಣ ಬಿಜೆಪಿ ಸರ್ಕಾರ ಬಂದ ಮೇಲೆ ಇವಕ್ಕೆಲ್ಲ ಕಡಿವಾಣ ಬಿದ್ದಿದ್ದು, ಈ ವಿಷಯದಲ್ಲಿ ನಾವು ರಾಜಕಾರಣ ಮಾಡಿಲ್ಲ.ಜಿ.ಪರಮೇಶ್ವರ್ ಅವರನ್ನ ನಾವು ಸಜ್ಜನ, ದೇಶ ಮತ್ತು ರಾಜ್ಯದ ಬಗ್ಗೆ ಕಳಕಳಿ ಇರುವವರು ಎಂದು ತಿಳಿದುಕೊಂಡಿದ್ದೇವೆ. ರಾಹುಲ್ ಗಾಂಧಿಯಂತೆ ಚಿಲ್ಲರೆಯಾಗಿ ಮಾತನಾಡುವುದನ್ನ ಬಿಡಬೇಕು ಎಂದರು.
ಜಿ.ಟಿ.ದೇವೇಗೌಡ ಹೇಳಿಕೆ ಬಿಜೆಪಿಗೆ ಏನೂ ಡ್ಯಾಮೇಜ್ ಆಗೋಲ್ಲ:
ಶಾಸಕ ಜಿ.ಟಿ.ದೇವೇಗೌಡ ಮೊನ್ನೆ ಮೊನ್ನೆವರೆಗೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ವಿರುದ್ಧ ಮಾತನಾಡಿದ್ದರು ಈಗ ಏಕಾಏಕಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ ಈಗ ರಾಜಕಾರಣದಲ್ಲಿ ಕೆಲವರಿಗೆ ತಮಗೆ ಬೇಕಾದ ಸ್ಥಾನಮಾನ ಸಿಗದೆ ಇದ್ದಲ್ಲಿ, ಟಿಕೆಟ್, ಮಂತ್ರಿ ಸ್ಥಾನ ಸಿಗದೆ ಹೋದ್ರೆ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು ಪಕ್ಷದ ವಿರುದ್ಧ ಮಾತನಾಡುವುದು, ಪಕ್ಷ ಬಿಡುವ ಕೆಲಸ ಮಾಡ್ತಾರೆ.
ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅದ್ದರದ್ದೆ ಆದ ವಿಚಾರಧಾರೆ ಇರುತ್ತದೆ.ತಮ್ಮ ಸ್ವಂತದ ಅಧಿಕಾರದ ಸ್ಥಾನಮಾನಕ್ಕಾಗಿ ಬಡಿದಾಡಿಕೊಳ್ಳುವವರು ಜಾಸ್ತಿ ಆಗಿದ್ದಾರೆ ಎಂದ ಅವರು, ಇತ್ತೀಚಿನ ವರೆಗೂ ಮುಖ್ಯಮಂತ್ರಿ ವಿರುದ್ಧ ಜಿ.ಟಿ.ದೇವೇಗೌಡ ಮಾತನಾಡಿದ್ದರು.ಈಗ ಅಚಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಏನ್ ಘಟಾನುವಳಿಗಳು ಆಗಿವೆ ಎಂಬುದನ್ನ ನೋಡಿಕೊಳ್ಳಬೇಕು. ಅವರ ಪಕ್ಷದ ಆಂತರಿಕ ವಿಚಾರ ಆಗಿದ್ದು ಈಗ ರಾಜ್ಯ ಸರ್ಕಾರದ ವಿರುದ್ಧ ಮುಡಾ ಮತ್ತು ವಾಲ್ಮೀಕಿ ಹಗರಣ ಕೇಳಿ ಬಂದಿವೆ ಇಂತಹ ಸಮಯದಲ್ಲಿ ಜಿ.ಟಿ.ದೇವೇಗೌಡ್ರ ಹೇಳಿಕೆ ಸರಿಯಲ್ಲಎಂದರು