ಹುಬ್ಬಳ್ಳಿ: ದಲಿತಪರ ಸಂಘಟನೆಗಳಿಂದ ಹುಬ್ಬಳ್ಳಿ-ಧಾರವಾಡ ಬಂದ್ ಕರೆ ನೀಡಲಾಗಿದೆ. ರಾತ್ರಿಯಿಂದಲೂ ಅಧಿಕಾರಿ ಸಿಬ್ಬಂದಿ ಬಂದೋಬಸ್ತ್ ನಲ್ಲಿದ್ದಾರೆ.
2000ಕ್ಕೂ ಹೆಚ್ಚು ಪೋಲಿಸ್, ಹೋಂ ಗಾರ್ಡ್ಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಲವಂತದ ಬಂದ್ ಗೆ ಯಾವುದೇ ಅವಕಾಶ ನೀಡಿಲ್ಲ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ
10ಗಂಟೆ ಸುಮಾರಿಗೆ ಚನ್ನಮ್ಮ ವೃತ್ತದ ಬಳಿ ಎಲ್ಲಾ ಪ್ರತಿಭಟನಾಕಾರರು ಸೇರಲಿದ್ದಾರೆ. ಹೀಗಾಗಿ ಚನ್ನಮ್ಮ ವೃತ್ತಕ್ಕೆ ಸಂಪರ್ಕಿಸೋ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನ ಹಾಕಲಾಗಿದೆ ಎಂದರು.
ಪ್ರತಿಭಟನಾಕಾರರು ಕೈಯಲ್ಲಿ ಕಲ್ಲು ಹಿಡಿದಿರೋದು, ವಾಹನಗಳ ಗಾಳಿ ತೆಗೆಯೋದು ಗಮನಕ್ಕಿಲ್ಲ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುತ್ತಿರುವುದು ಗಮನಕ್ಕೆ ಇಲ್ಲ. ಆ ರೀತಿ ಮಾಡುತ್ತಿರುವುದರ ಕುರಿತು ಗಮನ ಹರಿಸುತ್ತೇನೆ ಎಂದು ಅವರು ಹೇಳಿದರು.