ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಗುರುದ್ವಾರದ ಗುರುಸಿಂಗ್ ಸಭಾಭವನದಲ್ಲಿ ಗುರುನಾನಕ್ ಜಯಂತಿ ಆಚರಿಸಲಾಯಿತು
ಗುರುದ್ವಾರವನ್ನು ವಿವಿಧ ಬಗೆಯ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಗುರುದ್ವಾರಕ್ಕೆ ಬೆಳಿಗ್ಗೆಯಿಂದ ರಾತ್ರಿವರೆಗೂ ಅಪಾರ ಸಂಖ್ಯೆಯಲ್ಲಿ ಸಿಖ್ಖರು ಭೇಟಿ ನೀಡಿ ಪ್ರಾರ್ಥಿಸಿದರು. ‘ಗುರು ಗ್ರಂಥ ಸಾಹೇಬ್’ ಧರ್ಮಗ್ರಂಥಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದರು.
ಜಯಂತಿ ಅಂಗವಾಗಿ ನ.10ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನ.15ರಂದು ಪಂಜಾಬ್ ಅಮೃತಸರದ ಹಿರ್ದೇಜಿತ್ ಸಿಂಗ್ ಅವರು ಗುರುನಾನಕ್ ಅವರ ಕುರಿತು ಕಥೆ ವಾಚಿಸಿದರು. ಗುರುವಂತ್ ಸಿಂಗ್ ಅವರು ಕೀರ್ತನೆ ಹಾಡಿದರು. ಇದಕ್ಕೂ ಮುನ್ನ ಕವಿ ದರ್ಬಾರ್ ಹಾಗೂ ಸಂಗೀತ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.