ಹುಬ್ಬಳ್ಳಿ: ಸಿಎಂ ಸಿದ್ಧರಾಮಯ್ಯನವರು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನದ ಪರವೋ..? ಶರಿಯತ್ ಪರವೋ ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಲೇವಡಿ ಮಾಡಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 90 ಸಾವಿರ ಏಕರೆ ಕಬಳಿಸಲು ಹುನ್ನಾರ ಮಾಡಿದೆ ಇದು ಲ್ಯಾಂಡ್ ಜಿಹಾದ್. ಧಾರವಾಡ ಜಿಲ್ಲೆ ಒಂದರಲ್ಲಿಯೇ 3000 ಎಕರೆ. 1500 ವರ್ಷದ ಹಿಂದಿನ ಸೋಮೇಶ್ವರ ದೇವಸ್ಥಾನ ಇದೆ. 1500 ವರ್ಷಗಳ ಹಿಂದೇ ಎಲ್ಲಿ ಇಸ್ಲಾಂ ಇತ್ತು. ಮಲ್ಲಿಕಾಪರ್ ದಾಳಿ ಆಗುವವರೆಗೂ ದಕ್ಷಿಣಕ್ಕೆ ಇಸ್ಲಾಂ ಧರ್ಮ ಬಂದಿದೆ. ಸಿಎಂ ಮನೆದೇವರ ಬೀರಲಿಂಗೇಶ್ವರ ದೇವಸ್ಥಾನ ವಕ್ಪ್ ಪ್ರಾಪರ್ಟಿಯಾಗಿದೆ ಎಂದರು.
ವಿಶ್ವೇಶ್ವರಯ್ಯ ಓದಿದ ಶಾಲೆ ಕೂಡ ವಕ್ಪ್ ಅಂತ ನಮೂದು ಮಾಡಿದ್ದಾರೆ.ಕಂಡಕಂಡವರ ಆಸ್ತಿ ಕಬಳಿಸಿ ಬೇಲಿ ಹಾಕಲು ವಕ್ಪ್ ಗೆ ಅಧಿಕಾರವಿಲ್ಲ. ಕುರಿ,ತೋಳನ ಹತ್ತಿರ ನ್ಯಾಯ ಕೇಳಿದರೇ ನ್ಯಾಯ ಸಿಗುತ್ತೆಯೇ..? ವಕ್ಪ್ ಗೆಜೆಟ್ ನಲ್ಲಿ ಯಾಕೆ ಎದೆಗಾರಿಕೆ ತೋರುತ್ತಿಲ್ಲ. ವೋಟ್ ಬ್ಯಾಂಕ್ ಗಾಗಿ ಮತಾಂತರ ಮಾಡುವ ಅಸಂವಿದಾನಿಕ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ವಕ್ಪ್ ದಲಿತರ ಹಾಗೂ ಶೋಷಿತರಿಗೆ ಮರಣ ಶಾಸನ ರೀತಿಯಲ್ಲಿದೆ. ಕಾಯಿದೆ ಎಲ್ಲಿಯವರೆಗೆ ಇರುತ್ತೇ ಅಲ್ಲಿಯವರೆಗೆ ಇದು ತೂಗುಗತ್ತಿ. ದಾನ ಕೊಟ್ಟ ಆಸ್ತಿ ಮಾತ್ರವೇ ವಕ್ಪ್ ನಿರ್ವಹಣೆ ಜವಾಬ್ದಾರಿ. ಕಾಂಗ್ರೆಸ್ ಪಾರ್ಟಿ ನಿಲುವು ಸ್ಪಷ್ಟ ಪಡಿಸಬೇಕು. ಸಂವಿದಾನ ಪರವೋ..? ಶರಿಯಾ ಪರವೋ..? ಎಂದು ಪ್ರಶ್ನಿಸಿದರು.
ಜಮೀರ್ ಅಹ್ಮದ್ ಖಾನ್ ಯಾವುದೇ ಆದಾರದ ಮೇಲೆ ಅದಾಲತ್ ನಡೆಸುತ್ತಿದ್ದಾರೆ. ಇದಕ್ಕೆ ಸಿಎಂ ಬೆಂಬಲ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಪುಟದಿಂದ ಜಮೀರ್ ಅವರನ್ನು ವಜಾ ಮಾಡಬೇಕು. ವಕ್ಪ್ ಆಸ್ತಿಯ ಬಗ್ಗೆ ಸಂಪೂರ್ಣ ಪರಿಶೀಲನೆ ಆಗಬೇಕು. ಭಾರತದ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ವಕ್ಪ್ ಅದಾಲತ್ ನಡೆಸುವ ಬಗ್ಗೆ ಸಿಎಂ ಸ್ಪಷ್ಟ ಪಡಿಸಬೇಕು. ಅಧಿಕಾರ ಕೊಟ್ಟ ಜನರ ತೆಲೆಯ ಮೇಲೆ ಬಷ್ಮಾಸುರನ ರೀತಿಯಲ್ಲಿ ಕಾಂಗ್ರೆಸ್ ಕೈಯಿಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧ ನಮಾಜ್ ಮಾಡಲು ಮಾತ್ರ ಸೀಮಿತ ಅಂತ ಹೇಳ್ತಾರೆ. ಈ ದಾಸ್ಯ ಬಂದಿದ್ದೇ ಮತದ ಗುಲಾಮರಾಗಿ 1974ರ ತಿದ್ದುಪಡಿ ತಂದಿದ್ದೇ ಕಾರಣ. ಸಿಎಂ ಅವರೇ ಜಮೀರ್ ಅಹ್ಮದ್ ಖಾನ್ ಗೆ ಸರ್ವಾಧಿಕಾರಿ ಕೊಟ್ಟಿದ್ದೀರಾ..? ಜಮೀರ್ ಅಹ್ಮದ್ ಖಾನ್ ಟಿಪ್ಪು ಸುಲ್ತಾನ್ ಅಲ್ಲ. ಕಾಯಿದೆ ತಿದ್ದುಪಡಿ ಕೇಂದ್ರದಿಂದ ಆಗಬೇಕು. ಗೆಜೆಟ್ ರದ್ದು ಮಾಡಬೇಕಾಗಿರುವುದು ರಾಜ್ಯ ಸರ್ಕಾರ. ಕಾಂಗ್ರೆಸ್ ಎದೆಗಾರಿಕೆ ತೋರಿಸಿದರೇ ಭಾರತ ವಿಭಜನೆ ಆಗದೇ ಇರುವುದನ್ನು ತಡಬೇಕಿತ್ತು. ಕರಾಳ ಕಾಯಿದೆ ವಿರುದ್ಧ ಎದೆಗಾರಿಕೆ ತೋರಿಸಲು ಬಿಜೆಪಿ ಸಿದ್ಧವಾಗಿದೆ ಎಂದರು.
ಉಪಚುನಾವಣೆಯಲ್ಲಿ ನಾವು ಸೋತಿದ್ದೇವೆ, ಆದರೇ ಸತ್ತಿಲ್ಲ. ಕಾಂಗ್ರೆಸ್ಸಿನವರು ರಾಕ್ಷಸರು, ಮೊದಲು ಗೆಲುವು ಸಾಧಿಸುತ್ತಾರೆ. ಪಾಪದ ಕೊಡ ತುಂಬುವವರೆಗೆ ಪಾಪಿ ಚಿರಾಯು ಆಗಿಯೇ ಇರ್ತಾನೆ. 2023 ರಲ್ಲಿ ನಾವು ಅನ್ಯಾಯದ ಕೆಲಸ ಮಾಡಿ. ನಮ್ಮ ದೌರ್ಬಲ್ಯದಿಂದ ಸೋತಿದ್ದೇವೆ ಎಂದು ಸಮಜಾಯಿಷಿ ನೀಡಿದರು.