ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಘೋಷಣೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಕ್ಕಿದ್ದರಿಂದ ದೇವಸ್ಥಾನಗಳಿಗೆ ಒಳ್ಳೆಯ ಕಲೆಕ್ಷನ್ ಆಗಿದೆ.
ಹೌದು, ಉಚಿತ ಪ್ರಯಾಣ ಶುರುವಾಗಿದಾಗಿನಿಂದ ಮಹಿಳೆಯರು ಮನೆಯಲ್ಲೇ ಇರುತ್ತಿಲ್ಲ, ಯಾವ್ಯಾವ ಊರುಗಳಿಗೆ ದೇವಾಸ್ಥಾನಗಳಿಗೆ ಹೋಗಿಲ್ಲವೋ ಅಲ್ಲಿಗೆಲ್ಲಾ ಹೋಗುತ್ತಿದ್ದು ದೇವಾಸ್ಥಾನದ ಖಜಾನೆ ಭರ್ತೀಯಾಗಿದೆ.
ಕಳೆದ ಒಂದು ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ 11ರ ವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ-ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ.
ಯಾವ ದೇವಾಲಯಗಳಿಗೆ ಎಷ್ಟು ಆದಾಯ?
2022ರ ಜೂನ್ 11 ರಿಂದ ಜುಲೈ 15ರ ವರೆಗೆ ಹೋಲಿಕೆ ಮಾಡಿದ್ರೆ 2023 ಜೂನ್ 11 ರಿಂದ ಜುಲೈ 15ರ ವರೆಗೆ ದೇವಸ್ಥಾನಗಳ ಆದಾಯದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.
ಕುಕ್ಕೆ ಸುಬ್ರಮಣ್ಯ ದೇವಾಲಯ
ಕಳೆದ ವರ್ಷ – 11.13 ಕೋಟಿ ರೂ.
ಈ ವರ್ಷ – 11.16 ಕೋಟಿ ರೂ.
ಮೈಸೂರಿನ ಚಾಮುಂಡೇಶ್ವರಿ
ಕಳೆದ ವರ್ಷ – 48.01 ಲಕ್ಷ ರೂ.
ಈ ವರ್ಷ – 3.63 ಕೋಟಿ ರೂ.
ಯಡಿಯೂರು ಸಿದ್ದಲಿಂಗೇಶ್ವರ
ಕಳೆದ ವರ್ಷ – 1.20 ಕೋಟಿ ರೂ.
ಈ ವರ್ಷ – 1.48 ಕೋಟಿ ರೂ.
ನಂಜನಗೂಡು ಶ್ರೀಕಂಠೇಶ್ವರ
ಕಳೆದ ವರ್ಷ – 1.05 ಕೋಟಿ ರೂ.
ಈ ವರ್ಷ – 1.27 ಕೋಟಿ ರೂ.
ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ
ಕಳೆದ ವರ್ಷ – 1.02 ಕೋಟಿ ರೂ.
ಈ ವರ್ಷ – 1.41 ಕೋಟಿ ರೂ.
ಬೆಂಗಳೂರು ಬನಶಂಕರಿ
ಕಳೆದ ವರ್ಷ – 65.82 ಲಕ್ಷ ರೂ.
ಈ ವರ್ಷ – 83.64 ಲಕ್ಷ ರೂ.
ದ.ಕನ್ನಡ ಮಹಾಲಿಂಗೇಶ್ವರ
ಕಳೆದ ವರ್ಷ – 43.33 ಲಕ್ಷ ರೂ.
ಈ ವರ್ಷ – 48.09 ಲಕ್ಷ ರೂ.
ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯ
ಕಳೆದ ವರ್ಷ – 20.76 ಲಕ್ಷ ರೂ.
ಈ ವರ್ಷ – 27.98 ಲಕ್ಷ ರೂ.
ಕನಕಪುರದ ಕಬ್ಬಾಳಮ್ಮ
ಕಳೆದ ವರ್ಷ – 13.96 ಲಕ್ಷ ರೂ.
ಈ ವರ್ಷ – 19.64 ಲಕ್ಷ ರೂ.