ಮುಂಬೈ ;- ಕೋಳಿ ಬೆಲೆ ಶೇಕಡ 30 ರಿಂದ 40 ರಷ್ಟು ಕುಸಿತ ಕಂಡಿದ್ದು, ಕೋಳಿ ಫಾರ್ಮ್ ನಲ್ಲಿ ದರ ಕೆಜಿಗೆ ಸರಾಸರಿ 80 ರೂಪಾಯಿಗೆ ಇಳಿದಿದೆ.
ಕಳೆದ ಜೂನ್ ನಲ್ಲಿ ಕೋಳಿ ದರ ಕೆಜಿಗೆ 120 ರೂ.ವರೆಗೆ ಜಿಗಿದಿತ್ತು. ತರಕಾರಿ, ಬೇಳೆ ಕಾಳು ಬೆಲೆ ಗಗನಕೇರಿದ್ದು, ಕೋಳಿ ದರ ಕಡಿಮೆಯಾಗಿದೆ. ಕೋಳಿ ದರ ಇಳಿಕೆಯಾಗಿರುವುದು ಬೆಲೆ ಏರಿಕೆಯ ದಿನಗಳಲ್ಲಿ ಋಣಾತ್ಮಕ ಹಣದುಬ್ಬರ ಕಂಡ ಏಕೈಕ ಪ್ರಮುಖ ಆಹಾರವಾಗಿದೆ.
ಶ್ರಾವಣ ಮಾಸದ ಸಂದರ್ಭದಲ್ಲಿ ಕೋಳಿ ಮಾಂಸ ಸೇವನೆ ಪ್ರತಿ ವರ್ಷ ಕಡಿಮೆಯಾಗುತ್ತದೆ. ಹಾಗಾಗಿ ದರ ಕಡಿಮೆಯಾಗುವುದು ಸಹಜವಾಗಿರುತ್ತದೆ. ಈ ವರ್ಷ ದರ ಇಳಿಕೆ ಹೆಚ್ಚಾಗಿದೆ. ಜುಲೈನಲ್ಲಿ ಕೋಳಿ ಬೆಲೆ ಶೇಕಡ 50ರಷ್ಟು ಕುಸಿತ ಕಂಡಿದೆ. ಜೂನ್ ನಲ್ಲಿ ಕೆಜಿಗೆ 120 ರೂ. ವರೆಗೆ ತಲುಪಿದ್ದ ಕೋಳಿ ದರ ಜುಲೈನಲ್ಲಿ 55 -60 ರೂ.ಗೆ ಇಳಿದಿದ್ದು, ಕೋಳಿ ಸಾಕಣೆಯನ್ನು ಉತ್ಪಾದಕರು ಕಡಿಮೆ ಮಾಡಿದ್ದಾರೆ. ಹೀಗಾಗಿ ಬೆಲೆ ಸ್ವಲ್ಪ ಏರಿಕೆ ಕಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿಯಷ್ಟು ಇದೆ.